ಬೆಂಗಳೂರು : ಸಂಜಯ್ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್ ಬಳಿ ಮಧ್ಯರಾತ್ರಿ ಒಂದೂವರೆ ಸುಮಾರಿಗೆ ಮೋಟರ್ ಸೈಕಲ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರುಗಳು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಹಿಂಬದಿ ಸವಾರ ಮೃತಪಟ್ಟಿರುತ್ತಾರೆ.
ಪ್ರಥಮ್ ೨೬ ವರ್ಷ ಉತ್ತರ ಪ್ರದೇಶದವ. ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಈತನು ಮೃತಪಟ್ಟರೆ, ಚಾಲಕ ಗುದ್ದು ಕುಮಾರಿ ಯಾದವ್ ೨೭ ವರ್ಷ ತಲೆಗೆ ತೀವ್ರತರವಾದ ಗಾಯಗೊಂಡು ಯಲಹಂಕ ಕೆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾನೆ.
ಸಂಜಯ್ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.



