ಚಿತ್ರದುರ್ಗ: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವದ ಮೊದಲ ಸಾಮಾಜಿಕ ನ್ಯಾಯದ ಹರಿಕಾರ, ವಿಶ್ವಗುರು ಶ್ರೀಬಸವೇಶ್ವರ ಜಯಂತಿ ಅಂಗವಾಗಿ ಜನಜಾಗೃತಿ ಮೂಡಿಸಲು.ಚಿತ್ರದುರ್ಗದ ವೀರಶೈವ ಸಮಾಜದಿಂದ ಯುವಕರು ನಗರದಲ್ಲಿ ಬೈಕ್ ಯಾಲಿ ನಡೆಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನ ದಿಂದ ಹೊರಟ ಬೈಕ್ ರ?ಯಾಲಿ, ಆನೆಬಾಗಿಲು, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಮದಕರಿ ಸರ್ಕಲ್,ಗಾಯತ್ರಿ ಸರ್ಕಲ್,ಜೆ.ಸಿ. ಆರ್.ಆರ್.ಟಿ.ಓ.ಕಚೇರಿ ರಸ್ತೆ, ಕೆಳಗೋಟೆ,ಕನಕ ವೃತ್ತ ದ ಮೂಲಕ ನೀಲಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ಬೈಕ್ ರ?ಯಾಲಿ ಮುಕ್ತಾಯ ಗೊಂಡಿತು.
ಈ ಸಂಧರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಜಿತೇಂದ್ರ, ಪಂಚಮಸಾಲಿ ಸಮಾಜ ದ ಪ್ರಕಾಶ್, ವಿಶ್ವ ಹಿಂದು ಪರಿಷತ್ ನ ರುದ್ರೇಶ್, ವೀರಶೈವ ಅರ್ಬನ್ ಸೊಸೈಟಿಯ ನಿರ್ದೇಶಕ ಪರಮೇಶ್, ಪಿಳ್ಳೆಕೆರನಹಳ್ಳಿ ಬಸವರಾಜ್, ವೀರೇಂದ್ರ, ನಗರಸಭೆ ಸದಸ್ಯರುಗಳಾದ ಕೆ.ಬಿ.ಸುರೇಶ್, ಜಯಣ್ಣ, ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಹೆಚ್.ಎಂ.ಮಂಜುನಾಥ್ ಇನ್ನು ಅನೇಕರು ಬೈಕ್ ರಾಲಿಯಲ್ಲಿ ಭಾಗವಹಿಸಿದ್ದರು.ಬಸವಣ್ಣನವರ ಭಾವಚಿತ್ರವುಳ್ಳ ಕೇಸರಿ ಭಾವುಟಗಳು ಮೆರವಣಿಗೆಯಲ್ಲಿ ಹಾಗೂ ನಗರದ ವಿವಿಧ ಬಡಾವಣೆ ಗಳಲ್ಲಿ ರಾರಾಜಿಸಿದವು.