This is the title of the web page
This is the title of the web page

ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ: ಮೊದಲ ಸ್ಥಾನದಲ್ಲಿ ಅಮೆರಿಕ

ನವದೆಹಲಿ: ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ 2022-23ರಲ್ಲಿಯೂ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡಿದೆ. 2021-22ರಲ್ಲಿ ಮೊದಲ ಬಾರಿಗೆ ಅಮೆರಿಕವು ಚೀನಾವನ್ನು ಹಿಂದಕ್ಕಿ ಮೊದಲ ಸ್ಥಾನಕ್ಕೇರಿತ್ತು.

ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, 2022-23ರಲ್ಲಿ ಭಾರತ ಮತ್ತು ಅಮೆರಿಕದ ಮಧ್ಯೆ 10.54 ಲಕ್ಷ ಕೋಟಿ ರೂ.ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ.
2021-22ರಲ್ಲಿ ಆಗಿದ್ದ ವ್ಯಾಪಾರಕ್ಕೆ ಹೋಲಿಸಿದರೆ ಶೇ 7.65ರಷ್ಟು ಹೆಚ್ಚಾಗಿದೆ.