ಬೆಂಗಳೂರು: ಶಿಕ್ಷಣತಜ್ಞ, ಪದ್ಮಭೂಷಣ, ಡಾಕ್ಟರ್ ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವದ ಮುಂದುವರೆದ ಭಾಗ -5 ಮತ್ತು ಹಿರಿಯ ಸಂಶೋಧಕರರಾದ ಡಾ.ಚಿದಾನಂದಮೂರ್ತಿ ಅವರ ಸಂಸ್ಕರಣೆ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜಯನಗರದಲ್ಲಿ ನಡೆಯಿತು.
ಲೇಖಕರು ಕನ್ನಡ ವಪರ ಚಿಂತಕರಾದ ಶ್ರೀರಾಜಕುಮಾರ್ ಸಭೆಯನ್ನು ಉದ್ದೇಶಿಸಿ ಡಾ.ನರಸಿಂಹಯ್ಯನವರು ಶಿಕ್ಷಣದಲ್ಲಿ ಸಾಧಿಸದ ಉನ್ನತ ಸಾಧನೆಯ ಹಿಂದಿನ ಶ್ರಮದ ಆನೇಕ ಘಟನೆಗಳನ್ನು ಮತ್ತು ಗಾಂಧೀಜಿ ಅವರ ಅವರ ಅನುಯಾಯಿಗಿ ತಮ್ಮ ಜೀವಿತದ ಕೊನೆಯವರೆಗೂ ಅನುಚಾನವಾಗಿ ಪಾಲಿಸಿಕೊಂಡು ಬಂದ ಸಾಧಕಯೋಗಿ ಅವರು.
ಅವರ ಬಾಲ್ಯ ಜೀವನದಲ್ಲಿ ಶಿಕ್ಷಣಕ್ಕಾಗಿ ಅನುಭವಿಸಿದ ಕಷ್ಟದ ದಿನಗಳನ್ನು ಸವಿಸ್ತಾರವಾಗಿ ತಿಳಿಸಿದರು. ಈ ಸಂರ್ದಭದಲ್ಲಿ ಬೆ.ನ.ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಟಿ ತಿಮ್ಮೇಶ್, ರಾಜ್ ಕುಮಾರ್, ಡಾ. ಮುದ್ದು ಕೃಷ್ಣ ಪ್ರೂ .ಜ್ಞಾನೇಶ್ವರ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರು ನಗರ ಜಿಲ್ಲಾ ಸಮಿತಿ ಅಧ್ಯಕ್ಷ ನಾ ಶ್ರೀಧರ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು, ಎಂ ಲಕ್ಷ್ಮೀ ನರಸಿಂಹ ಅವರ ವಂದನಾರ್ಪಣೆ ಮಾಡಿದರು.