ಬೆಂಗಳೂರು: ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧ ಮೊದಲನೇ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿ ಬಿಡಗುಡೆ ಮಾಡಿರುವ ಬಿಜೆಪಿ ಈ ತಿಂಗಳ 8 ತಿಂಗಳ 8ರಂದು ಎರಡನೇ ಹಂತದಲ್ಲಿ ಹಲವು ಅಭ್ಯರ್ಥಿಗಳ ಪಟ್ಟಿ ಬಿಡಗುಡೆ ಮಾಡಲು ಸಿದ್ಧತೆ ನಡೆಸಿದೆ.
ಮೊದಲ ಪಟ್ಟಿಯಲ್ಲಿ ಕರ್ನಾ ಟಕದ ಯಾವುದೇ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸಿದ ಹೈಕಮಾಂಡ್ ನಾಯಕರು. ಇನ್ನು ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಿಡುಗಡೆ ಆಗಲಿದೆ ಎಂದು ಇಂದು ಸಂಜೆಗೆ ಬಿಜೆಪಿ ಉನ್ನತ ಮಟ್ಟದ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.
ಎರಡನೇ ಪಟ್ಟಿ ಮಾರ್ಚ್ 8 ರಂದು ಬಿಡುಗಡೆಯಾಗುವ ಸಾಧ್ಯತೆಯಿದ್ದು, ಬಹುತೇಕ ಗೊಂದಲವಿಲ್ಲದ 10 ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟ.
1. ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್. (ಹಾಲಿ ಸಂಸದ).
2. ಕಲ್ಬುರ್ಗಿ – ಡಾ.ಉಮೇಶ್ ಜಾಧವ್.
3. ಬಾಗಲಕೋಟೆ – ಪಿ.ಸಿ. ಗದ್ದೀಗೌಡರ್.
4. ಶಿವಮೊಗ್ಗ – ಬಿ.ವೈ. ರಾಘವೇಂದ್ರ.
5. ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ.
6. ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ.
7. ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ.
8. ಕೊಪ್ಪಳ – ಕರಡಿ ಸಂಗಣ್ಣ.
9. ದಕ್ಷಿಣ ಕನ್ನಡ – ನಳಿನ್ಕುಮಾರ್ ಕಟೀಲ್.
10. ಮೈಸೂರು-ಕೊಡಗು – ಪ್ರತಾಪ್ ಸಿಂಹ.