ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಶಿಕ್ಷಣದಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪಕ್ಷದಮುಖಂಡರಾದ ಡಾ.ಸಿ.ಎನ್. ಅಶ್ವತ್ಥ್ನಾರಾಯಣ್, ಕೆ.ಗೋಪಾಲಯ್ಯ, ಸಿ.ಕೆ. ರಾಮಮೂರ್ತಿ, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಪಬ್ಲಿಕ್ ಯುನಿವರ್ಸಿಟಿ ಹಾಗೂ ಸ್ಟೇಟ್ ಯೂನಿವರ್ಸಿಟಿಗಳಲ್ಲಿ ಕುಲಪತಿಗಳ ಸ್ಥಾನ ತೆರವಾಗಿ ತಿಂಗಳುಗಳೇ ಕಳೆದಿದೆ. ಜೂನ್ ತಿಂಗಳಿಂದಲೇ ಅನೇಕ ಯೂನಿವರ್ಸಿಟಿಗಳಲ್ಲಿ ಕುಲಪತಿಗಳ ಸ್ಥಾನ ಖಾಲಿಯಾಗಿದೆ.
10 ತಿಂಗಳಾಗಿದೆ. ಕುಲಪತಿಗಳ ಸ್ಥಾನ ಭರ್ತಿ ಮಾಡಲು ಪ್ರಕ್ರಿಯೆ ನಡೆದಿದೆ.ಸರ್ಜ್ ಕಮಿಟಿ ಆಗಿದೆ. ಕಮಿಟಿ ವರದಿ ಕೊಟ್ಟಿದೆ. ಸಿಎಂಗೆ ಸಮಯವಿಲ್ಲ. ರಾಜ್ಯಪಾಲರು ಸುಮ್ಮನಾಗಿದ್ದಾರೆ. ಆರ್ಥಿಕತೆಯ ಕೊರತೆ, ಸಿಬ್ಬಂದಿಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಹಣವನ್ನು ಕೊಡಲ್ಲ, ಕುಲಪತಿಗಳ ನೇಮಕ ಮಾಡಲ್ಲ. 5 ವಿವಿಗಳಿಗೆ ಕುಲಪತಿಗಳ ನೇಮಕ ಮಾಡಬೇಕಿದೆ.
ಸಿಎಂ ಕಚೇರಿಯಲ್ಲಿದೆ ಕಡತಗಳು. ಅಸಡ್ಡೆ ಹಾಗೂ ನಿರ್ಲಕ್ಷ್ಯತನ ಈ ಸರ್ಕಾರ ತೋರುತ್ತಿದೆ ಎಂದು ದೂರಿದ್ದಾರೆ.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ವಿವಿಗಳು ಬೇಕು. ವ್ಯಕ್ತಿ ಜ್ಞಾನ ಪಡೆದಾಗ ಶೈಕ್ಷಣಿಕವಾಗಿ ಮುಂದುವರೆಯುತ್ತದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಈ ನೀತಿ ಇತ್ತು. ಪ್ರತಿ ಜಿಲ್ಲೆಯಲ್ಲೂ ಒಂದೊಂದು ವಿವಿ ಇರಬೇಕು ಎಂಬುದು ಇತ್ತು. ನಮ್ಮ ಸರ್ಕಾರ ಇದ್ದಾಗ 7 ಜಿಲ್ಲೆಯಲ್ಲಿ ವಿವಿ ರಚನೆ ಮಾಡಿದ್ದೇವೆ ಎಂದಿದ್ದಾರೆ.
ಬೀದರ್, ಕೊಪ್ಪಳ, ಕೊಡಗು, ಬಾಗಲಕೋಟೆ, ಚಾಮರಾಜನಗರ ಸೇರಿದಂತೆ 7 ಜಿಲ್ಲೆಗಳಲ್ಲಿ ವಿವಿ ಸ್ಥಾಪನೆ ಮಾಡಿದ್ದೇವೆ. 2022-23 ರ ಬಜೆಟ್ನಲ್ಲಿ ನೂತನ ವಿವಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ಮೀಸಲಿಟ್ಟಿದ್ದೇವು. ಹೆಚ್ಚೇನು ಅಲ್ಲ, ಕೇವಲ 2 ಕೋಟಿ ರೂಪಾಯಿ ಬಜೆಟ್ ಮೀಸಲಿಟ್ಟಿದ್ದೇವು. ಈಗ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿ ವರ್ಷ 2 ಕೋಟಿ, ತಿಂಗಳಿಗೆ ಅಲ್ಲ ಎಂದ ಅವರು, ಹಂಪಿ ವಿವಿಗೆ 1.20 ಕೋಟಿ ಕೊಟ್ಟಿದ್ದಾರೆ. ಹಂಪಿ ವಿವಿ ಕನ್ನಡ ವಿವಿ. ಇವರು ಕನ್ನಡ ಆಸ್ಮಿತೆ ಬಗ್ಗೆ ಮಾತನ್ನಾಡುತ್ತಾರೆ. ಮೊದಲು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಹಣದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದ್ದಾರೆ.