ದೇವನಹಳ್ಳಿ: ಬಿಜೆಪಿಯ ಒಡನಾಟದಲ್ಲಿ ನಗರಸಭೆ,ಮಹಾನಗರ ಪಾಲಿಕೆ , ಎಂಎಲ್ಎ, ಎಂಎಲ್ ಸಿ, ಎಂಪಿ ಚುನಾವಣೆಗಳಲ್ಲಿ ಅತಿ ಹೆಚ್ಚು ಬಾರಿ ಅಧಿಕೃತ ಚುನಾವಣಾ ಏಜೆಂಟಾಗಿ ಪಕ್ಷದ ಹಲವು ಹಿರಿಯಮುಖಂಡರ ಪ್ರಶಂಸೆಗೆ ಪಾತ್ರನಾಗಿದ್ದೇನೆ, ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಭಾರತ ದೇಶದ ಲೋಕಾರ್ಥ ಮತ್ತು ಸೇವಾರ್ಥ ಹಲವಾರು ಯೋಜನೆಗಳ ಬಿಜೆಪಿ ರಾಯಭಾರಿಯಾಗಿ ಮೋದಿಯ ರೂವಾರಿಯಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿ ಕ್ಷೇತ್ರದ ಜನತೆಯ ಮುಂದೆ ಬಂದಿದ್ದೇನೆ ನನ್ನೊಂದಿಗೆ ಕೈಜೋಡಿಸಿ ಎಂದು ಬಿಜ್ಜವಾರ ಎಚ್.ಲೋಕೇಶ್ ಹೇಳಿದರು.
ದೇವನಹಳ್ಳಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿಜ್ಜವಾರ ಎಚ್ .ಲೋಕೇಶ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಈ ಹಿಂದೆ ಇದ್ದಂತಹ ಸಂಸದರು ಮಾಡದಿರುವ ಕ್ಷೇತ್ರದ ಅಭಿವೃದ್ಧಿಯ ಕೆಲಸಗಳನ್ನು ಮಾಡಲು ನನಗೆ ಒಂದು ಅವಕಾಶಕಲ್ಪಿಸಿದ್ದಾರೆ, ದೇಶ ಮತ್ತು ರಾಜ್ಯದ ಅನ್ಯ ಜಿಲ್ಲೆಗಳಿಗೆ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆ, ಬಿಜೆಪಿ ಪಕ್ಷವು ಸಹ ನನಗೆ ಸಹಕಾರ ಕೊಟ್ಟು ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಒಂದು ವೇಳೆ ನೀಡದಿದ್ದಲ್ಲಿ ನನ್ನ ಈ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ದೇಶದಲ್ಲಿ ಬೆಳೆ ಬಿತ್ತನೆ ಮತ್ತು ಫಸಲಿನ ಇಳುವರಿ ಅಳತೆ ಮಾಡಿ ಪ್ರತಿ ಬೆಳೆಗೂ ಮಾನಿಟರಿಂಗ್ ನಡೆಸಿ ಆದಾಯ ಪಡೆಯುವ ಪ್ರಕ್ರಿಯೆ ಯೋಜನೆಗಳನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಕ್ಷೇತ್ರದ ರೈತರಲ್ಲಿ ಮಾದರಿ ರೈತನ ರೀತಿಯಲ್ಲಿ ಬೆಳೆ ಬೆಳೆಯುವ ಮಾನಸಿಕತೆ ಬೆಳೆಸಿ ಕೊಡಬೇಕೆನ್ನುವುದೇ ನನ್ನ ಉದ್ದೇಶ ಎಂದರು.
ಆತ್ಮನಿರ್ಭರ ಭಾರತ ಕಲ್ಪನೆ ಅಡಿಯಲ್ಲಿ ಭಾರತದಪ್ರತಿಯೊಬ್ಬ ಪ್ರಜೆಯೂ ಸ್ವಾಲಂಬಿಯಾಗಬೇಕು, ಇಡೀ ಭಾರತದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಬರಬೇಕು ಮೋದಿಜಿಯವರ ಆಶಯಗಳನ್ನು ದೇಶದ ಎಲ್ಲಾ ಕ್ಷೇತ್ರದ ಜನತೆ ಮುಂದೆ ಪ್ರಸ್ತುತಪಡಿಸಬೇಕು ಹಾಗೂ ಕ್ಷೇತ್ರದ ಜನರ ಆರೋಗ್ಯ,ಶಿಕ್ಷಣ ಮತ್ತು ಆರ್ಥಿಕ ಸಮಸ್ಯೆಗಳನ್ನು ವಾಸ್ತವವಾಗಿ ತಿಳಿದು ಪರಿಹಾರ ನೀಡಲು ಜನರ ಮುಂದೆ ಬಂದಿದ್ದೇನೆ ನನಗೆ ಬೆಂಬಲ ನೀಡುವುದರ ಮೂಲಕ ಆಶೀರ್ವದಿಸಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ರಂಗ ಹನುಮಯ್ಯ ಮತ್ತು ರವೀಶ್ ಮತ್ತಿತರರು ಇದ್ದರು.