ನಂಜನಗೂಡು : ಇಲ್ಲಿನ ಮೀಸಲು ಕ್ಷೇತ್ರದ ಅಭ್ಯರ್ಥಿ ಬಿ.ಹರ್ಷ ವರ್ಧನ್ ಮಂಗಳವಾರ ವಿದ್ಯಾವರ್ಧಕ ಮೈದಾನದಿಂದ ಸಾವಿರಾರು
ಕಾರ್ಯಕರ್ತರೊಂದಿಗೆ ಕಾಲು ನಡಿಗೆಯ ಮೂಲಕ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿವುವುದಕ್ಕೆ ಮೊದಲು ನಗರದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ರೊಂದಿಗೆ ಪೂಜೆ ಸಲ್ಲಿಸಿದರು.
ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೊರಳವಾಡಿ ಮಹೇಶ್, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಬಾಲಚಂದ್ರ, ಶ್ರೀನಿವಾಸರೆಡ್ಡಿಯವರೊಂದಿಗೆ ಚುನಾವಣಾಧಿಕಾರಿ ಕೃಷ್ಣಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕ ಬಿ.ಹರ್ಷವರ್ದನ್ ನಾಮಪತ್ರ ಸಲ್ಲಿಸುವ ವೇಳೆ ಬೃಹತ್ ಸಂಖ್ಯೆಯ ಯುವ ಕಾರ್ಯಕರ್ತರು,ಕ್ಷೇತ್ರದ ಮತದಾರರು ಪಾಲುಗೊಂಡಿದ್ದು ಸಂತೋಷ ತಂದಿದೆ, ನನ್ನ ಅವಧಿಯಲ್ಲಿ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ಯಂತ್ರವನ್ನು ಬಳಸಿಕೊಂಡು.
ವಿ.ಶ್ರೀನಿವಾಸ ಪ್ರಸಾದ್ ರನ್ನು ಸೋಲಿಸಿದ್ದರು ,ಅದರ ನಂತರ ಸೋಲನ್ನು ಸವಾಲಾಗಿ ಸ್ವೀಕರಿಸಿ ಶಾಸಕನಾಗಿ ಆಯ್ಕೆ ಯಾದೆ, ನಗರಸಭೆ, ತಾ.ಪಂ. ಗ್ರಾ.ಪಂಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ,ಕಾಂಗ್ರೆಸ್ ಪ್ರತಿ ಗೃಹಿಣಿಯರಿಗೆ 2 ಸಾವಿರ, 200 ಯುನಿಟ್ ವಿದ್ಯುತ್ ನೀಡುವುದಾಗಿ ಹಂಚುತ್ತಿರುವ ಗ್ಯಾರಂಟಿ ಕಾರ್ಡ್ ನಗೆಪಾಟಲಿಗೆ ಈಡಾಗಿದೆ, ಜನರು ಇವರ ಸುಳ್ಳು ಆಶ್ವಾಸನೆಗಳನ್ನು ನಂಬುತ್ತಿಲ್ಲ, ಮೆ 13 ರಂದು ಮತ್ತೆ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರವನ್ನು ಸೆಟಿಲೇಟ್ ಟೌನ್ ಆಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಹೇಳಿದರು.
Leave a Review