ಗುಂಡ್ಲುಪೇಟೆ: ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ ಲೋಕಸಭಾ ಕ್ಷೇತ್ರದಿಂದ ಎಂಟರಿಂದ 10 ಮಂದಿ ಆಕಾಂಕ್ಷಿಗಳಿದ್ದರೂ ಆದರೂ ಪಕ್ಷ ನನ್ನನ್ನು ಪರಿಗಣಿಸಿ ಟಿಕೆಟ್ ನೀಡಿರುವುದಕ್ಕೆ ಋಣಿಯಾಗಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಬಾಲರಾಜ್ ಹೇಳಿದರು.
ತಾಲೂಕಿನ ಬೇಗೂರು, ಬರಗಿ, ಹಂಗಳ ಹಾಗೂ ತೆರಕಣಾಂಬಿ ಮಹಾಶಕ್ತಿ ಕೇಂದ್ರದಲ್ಲಿ ಚಾಮರಾಜನಗರ ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಹಿನ್ನೆಲೆ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ಆಡಳಿತ ಬರಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಆಯೋಜಿಸಿದ್ದ ಬೇಗೂರು ಮತ್ತು ಬರಗಿ ಹಾಗೂ ಹಂಗಳ ಮತ್ತು ತೆರಕಣಾಂಬಿ ಬಿಜೆಪಿ ಪ್ರಚಾರ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆ ಕಳೆದ 10 ವರ್ಷದಲ್ಲಿ ದೇಶದಲ್ಲಾಗಿರುವ ಬದಲಾವಣೆ ಭ್ರಷ್ಟಾಚಾರವಿಲ್ಲದ ಭಾರತ ಅಭಿವೃದ್ಧಿಯ ಕಡೆ ಮುಖ ಮಾಡಿದೆ ಎಂದರು.
ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಗರೀಬಿಹಠಾವೋ ಎಂದು ಹೇಳಿಕೊಂಡು ಬರುತ್ತಿದೆ.ಆದರೆ ಇಲ್ಲಿಯವರೆಗೆ ಬಡತನ ನಿರ್ಮೂಲನೆ ಯಾಗಿಲ್ಲ. ನರೇಂದ್ರ ಮೋದಿಯವರು 10 ವರ್ಷಗಳ ಆಡಳಿತ ಪ್ರಪಂಚದಲ್ಲಿ ಭಾರತದ ಅಭಿವೃದ್ಧಿ ಮೂರನೇ ಸ್ಥಾನಕ್ಕೆ ಬಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.ಹಿರಿಯರಾದ ಬಿಎಸ್ ಯಡಿಯೂರಪ್ಪ ನವರು ಹಾಗೂ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಪಕ್ಷದ ಎಲ್ಲಾ ಮುಖಂಡರು ಆಶೀರ್ವಾದದಿಂದ ಗೆಲುವು ದೊರೆಯಲಿದೆ ಎಂದರು.
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಜಾತ್ಯತೀತ ಜನತಾದಳಕೂಡ ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದೆ.ನಾನು ಕೊಳ್ಳೇಗಾಲ ಶಾಸಕನಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನುಮಾಡಿದ್ದೇನೆ. ಕೊಳ್ಳೇಗಾಲ ಹಾಗೂ ಯಳಂದೂರು ಇಲ್ಲಿನ ಆಸ್ಪತ್ರೆಗಳನ್ನು ಮೇಲ್ದರ್ಜೆ ಗೇರಿಸಿದ ಅಲ್ಲದೆ ಪ್ರವಾಸೋದ್ಯಮಕ್ಕೆ ಹೆಚ್ಚಿನಆದ್ಯತೆ ನೀಡಿದೆ ಮುಂದೆ ಜಿಲ್ಲೆಯ ಸಮಗ್ರಅಭಿವೃದ್ಧಿಯ ದೂರ ದೃಷ್ಟಿ ಹೊಂದಿದ್ದೇನೆ ಈಬಾರಿ ಮತದಾರರು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ಮಾತನಾಡಿ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು ನಮ್ಮ ಊರು ಹಾಗೂ ನಮ್ಮ ಬೂತ್ ನಲ್ಲಿರುವವರು ಕರೆತಂದು ಬಿಜೆಪಿಗೆ ಮತ ಹಾಕಿಸಿ ಬಾಲರಾಜ್ ಗೆಲುವಿಗೆ ಅವಕಾಶ ಮಾಡಿಕೊಡಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡಬೇಕು.
ಮೋದಿ 10 ವರ್ಷದ ಕೆಲಸ ದೇಶವನ್ನು ಊಹೆ ಮಾಡಿದ ರೀತಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಹಗರಣ ತುಂಬಿತ್ತು ಆದರೆ ಮೋದಿ ಬಂದ ನಂತರ ಪ್ರಗತಿ ಮತ್ತು ಅಭಿವೃದ್ಧಿ ಆರ್ಥಿಕತೆಯಲ್ಲಿ ಒಂಬತ್ತರಿಂದ ಐದನೇ ಸ್ಥಾನಕ್ಕೆ ಬಂದಿದೆ. ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸಿದ ದಿಟ್ಟ ನಾಯಕ ನರೇಂದ್ರ ಮೋದಿ ಗ್ಯಾರಂಟಿ ಯೋಜನೆಯಿಂದ ನಮಗೆ ಸೋಲಾಯಿತು. ಒಂದು ಕೊಟ್ಟು ಮತ್ತೊಂದನ್ನು ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ರೈತರ ಬಗ್ಗೆ ಕಾಳಜಿ ಇಲ್ಲ ಸರ್ಕಾರದಿಂದಬರ ಪರಿಹಾರ ಬಂದಿಲ್ಲ ಎಂದು ಕಿಡಿಕಾರಿದರು. ನಮ್ಮ ಸರ್ಕಾರ ಇದ್ದಾಗ ಕೆರೆಗಳಿಗೆ ಹಠ ಮಾಡಿ ನೀರು ತುಂಬುಸುತಿದ್ದೆವು. ಆದರೆ ಇದರ ಬಗ್ಗೆ ಮಾತನಾಡುವ ಧ್ವನಿ ಇಲ್ಲದಂತಾಗಿದೆ ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಕೆ ಮಾಡಿಕೊಂಡು ಎಸ್ಸಿ ಎಸ್ಟಿ ಸಮುದಾಯದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸಿ ಮಹಾದೇವ್ ಪ್ರಸಾದ್ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚನ್ನಮ್ಮಲ್ಲಿಪುರ ಬಸವಣ್ಣ ಕೇಂದ್ರ ಬರ ಪರಿಹಾರ ಮಾಜಿ ಅಧ್ಯಕ್ಷ ರಾಮಚಂದ್ರಎಪಿಎಂಸಿ ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ ಪಿಎಲ್ಡಿ ಮಾಜಿ ಅಧ್ಯಕ್ಷ ಹೂರೆಯಾಲ ಮಹೇಶ್ ದೊಡ್ದ ಹುಂಡಿ ಜಗದೀಶ್ ಮಲ್ಲಿಕಾರ್ಜುನ್ ಮಾಜಿ ಪುರಸಭೆ ಸದಸ್ಯ ಜೆಡಿಎಸ್ ಸುರೇಶ್ ಡಾಕ್ಟರ್ ನವೀನ್ ಮೌರ್ಯ ಹಾಗೂ ಎಸ್ ಸಿ ಮೋರ್ಚಾ ಅಧ್ಯಕ್ಷ ನಾಗಸ್ವಾಮಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಚಿಕ್ಕಾಟ್ಟಿ ಶಿವಣನಾಯ್ಕ ನಿಟ್ರೆ ನಾಗರಾಜಪ್ಪ ಹೂರೆಯಾಲ ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.