ಚಿಂತಾಮಣಿ: ಕ್ಷೇತ್ರವು ಜಿದ್ದಾ ಜಿದ್ದಿನ ಕ್ಷೇತ್ರವಾಗಿ ಮಾರ್ಪಾಟಾಗಿದ್ದು ರಾಜಕೀಯಕ್ಕೆ ಹೆಸರು ಪಡೆದಿರುವ ಕ್ಷೇತ್ರವಾಗಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ ಎರಡು ಪಕ್ಷಗಳ ನಡುವೆ ಬಿಜೆಪಿ ಪಕ್ಷ ಪೈಪೋಟಿ ನೀಡಲು ಸಿದ್ಧವಾದಂತೆ ಕ್ಷೇತ್ರ ಸಿದ್ಧವಾಗಿದೆ.
ಮಾಜಿ ಸಚಿವ ದಿವಂಗತ ಕೆ.ಎಂ. ಕೃಷ್ಣ್ಣಾರೆಡ್ಡಿ ಹೆಸರಿನಲ್ಲಿ ಕೆಎಂಕೆ ಟ್ರಸ್ಟ್‍ನ್ನು ಸ್ಥಾಪನೆ ಮಾಡಿಕೊಂಡು ರಾಜಕೀಯ ಪ್ರವೇಶಿಸಿದ ಜಿ. ಎನ್ ವೇಣುಗೋಪಾಲ್ ಸುಮಾರು ಮೂರು ವಷರ್ಗಳ ಕಾಲ ಸಮಾಜಸೇವೆ ಮಾಡಿಕೊಂಡು ಬಂದಿದ್ದು ಸಚಿವ ಕೆ ಸುಧಾಕರ್ ಹಾಗು ಲೋಕಸಬಾ ಸದಸ್ಯ ಎಸ್ ಮುನಿಶಾಮಿ ರವರ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿ ಇಂದು ಜಿ ಎನ್ ವೇಣುಗೋಪಾಲ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಜಿ. ಎನ್. ವೇಣುಗೋಪಾಲ್ ಮಾತನಾಡಿ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಹಲವು ಸಂಸ್ಥೆಗಳು ಬೇಕಾಗಿದ್ದು ಇಂಜಿನಿಯರಿಂಗ್, ಮೆಡಿಕಲ್, ಐಐಟಿ, ಪ್ರವಾಸಿ ತಾಣ, ಚಾರಣ ತಾಣಗಳು ಮುಂತಾದವುಗಳನ್ನು ಹೆಬ್ಬಯಕೆಯನ್ನು ಹೊಂದಿದ್ದು, ಸಮರ್ಪಕ ರಸ್ತೆಗಳು ಕುಡಿಯುವ ನೀರು ಮನೆ ಮನೆಗೆ ತಲುಪಿಸುವ ಮುಂತಾದ ಕಾರ್ಯಗಳನ್ನು ಮಾಡಲಾಗುವುದೆಂದರು. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು ಅದರಂತೆ ನನ್ನ ಗೆಲುವು ಸಾಧ್ಯವಾದಲ್ಲಿ ಚಿಂತಾಮಣಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದರು.
ವಿಶ್ವ ವಿಖ್ಯಾತ ತೆಲುಗು ನಟ ಎನ್.ಟಿ. ರಾಮರಾವ್ ಪುತ್ರಿ ಪುರಂದರೇಶ್ವರಿ ಮಾತನಾಡಿ ಜಿ.ಎನ್. ವೇಣುಗೋಪಾಲ್ ನಮ್ಮ ನಿಮ್ಮೆಲ್ಲರ ಸಹೋದರರಾಗಿದ್ದು ಇಲ್ಲಿ ಸೇರಿರುವ ಸಾವಿರಾರು ಕಾರ್ಯಕರ್ತರು ಅದಕ್ಕೆ ಸಾಕ್ಷಿಯಾಗಿದ್ದಾರೆ, ಇವರ ಸಮಾಜ ಸೇವೆಯನ್ನು ಗುರುತಿಸಿ ಹಿರಿಯ ನಾಯಕರಾದ ಕೆ.ಎಂ. ಕೃಷ್ಣ್ಣಾರೆಡ್ಡಿ ಅವರ ದತ್ತು ಪುತ್ರರೆಂದೇ ಖ್ಯಾತಿಯನ್ನು ಪಡೆದಿದ್ದು ಅದರಂತೆ ಇವರು ಸಹ ಕೆ.ಎಂ.ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಒಬ್ಬ ಸರಳ ಸಜ್ಜನಿಕೆ ರಾಜಕಾರಣಿಯಾಗಿದ್ದು ಇವರನ್ನು ಗೆಲ್ಲಿಸಿಕೊಳ್ಳುವುದರ ಮೂಲಕ ಕ್ಷೇತ್ರವನ್ನು ಮತ್ತಷ್ಟ್ಟು ಅಭಿವೃದ್ಧಿ ಪಡಿಸಬೇಕೆಂದರು.
ದಿವಂಗತ ಕೆ.ಎಂ. ಕೃಷ್ಣಾರೆಡ್ಡಿ ಚುನಾವಣೆಗೆ ನಿಂತಗಾ ನಮ್ಮ ತಂದೆಯವರು ಅವರ ಪರವಾಗಿ ಪ್ರಚಾರ ಮಾಡಿದಾಗ ಅವರು ಗೆಲುವು ಸಾಧಿಸಿದ್ದರು ಅದರಂತೆ ಇಂದು ಜಿ. ಎನ್. ವೇಣುಗೋಪಾಲ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದು ಅವರು ಸಹ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು.
ಲೋಕಸಭಾ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ಡಾ.ಎಂ.ಸಿ. ಸುಧಾಕರ್‍ಗಾಗಲಿ, ಜೆ.ಎಂ ಕೃಷ್ಣ್ಣಾರೆಡ್ಡಿಗಾಗಲಿ ಬೆಂಬಲಿಸುವ ಮಾತೇ ಇಲ್ಲ ನಮ್ಮದೇ ಪಕ್ಷದ ಜಿ.ಎನ್. ವೇಣುಗೋಪಾಲ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದು ಅವರ ಗೆಲುವು ಶತಸಿದ್ಧವೆಂದರು.
ಈ ಸಂದರ್ಭದಲ್ಲಿ ಸಂಸದ ಎಸ್ ಮುನಿಸ್ವಾಮಿ, ಎನ್.ಟಿ.ಆರ್ ಸುಪುತ್ರಿ ಪುರಂದರೇಶ್ವರಿ, ಜಿ.ಎನ್.ವೇಣುಗೋಪಾಲ್, ಪತ್ನಿ ರೇಖಾ, ಮುಖಂಡ ಸತ್ಯನಾರಾಯಣ ಮಹೇಶ್, ಅರುಣ್ ಬಾಬು, ಎಂ.ಎಸ್.ಪ್ರದೀಪ್, ಮಹೇಶ್ ಬೈ, ಶಿವಾರೆಡ್ಡಿ, ಮಂಜುನಾಥಾಚಾರಿ, ಡಾಬಮಂಜು, ನಾಗರಾಜ್, ದೇವರಾಜ್, ವೆಂಕಟೇಶ್, ದೊಡ್ಡ ನಾಗರಾಜ್, ಪೆದ್ದುರು ನಾಗರಾಜ್‍ರೆಡ್ಡಿ, ಅಕ್ಕಿಮಂಗಲ ನಾರಾಯಣಸ್ವಾಮಿ ಅಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Review