ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಘಟಾನುಘಟಿ ಅಭ್ಯರ್ಥಿಗಳ ನಡುವೆ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಭರ್ಜರಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಮೈಸೂರು ಚಾಮುಂಡೇಶ್ವರಿ ಕ್ಷೇತ್ರ ಈ ಬಾರಿ ರಾಜ್ಯದ ಗಮನ ಸೆಳೆದಿದೆ, ಕಾರಣ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಜಿ,ಟಿ ದೇವೇಗೌಡ ಹಾಗೆ ಒಂದು ಕಾಲದ ಜಿ, ಟಿ, ದೇವೇಗೌಡ ಬಂಟ ಸಿದ್ದೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇವರಿಬ್ಬದ್ದು ಈ ಚುನಾವಣೆಯಲ್ಲಿ ಜಿದ್ದಾ ಜಿದ್ದಿ ಪೈಪೆಪೋಟಿ ನಡೆಯಲಿದೆ ಎನ್ನಲಾಗಿದೆ. ಈ ಮಧ್ಯೆ ಮಾಜಿ ಶಾಸಕ ವಾಸು ಅವರ ಪುತ್ರ ಯುವನಾಯಕ ಕವೀಶ್ ಗೌಡ ಅವರ ಸಹ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳಲು ಹಲವು ನಾಯಕರ ಪೈಪೋಟಿಗಳ ನಡುವೆ ಸದ್ದುಗದ್ದಲವಿಲ್ಲದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ನೆನ್ನೆ ಮೈಸೂರು ತಾಲ್ಲೂಕು ಹಳ್ಳಿ ಬೋಗಾದಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೆರೆದ ವಾಹನದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಬೋಗಾದಿಯಿಂದ ಹೊರಟು ಗಂಗೋತ್ರಿ ಮುಖ್ಯರಸ್ತೆಯ ಮೂಲಕ ಕುಕ್ಕರಹಳ್ಳಿ ಕೆರೆ, ಜೆ, ಎಲ್, ಬಿ ಮಾರ್ಗವಾಗಿ ರಾಮಸ್ವಾಮಿ ವೃತ್ತದಿಂದ ಹಾರ್ಡಿಂಜ್ ವೃತ್ತದ ಕಡೆಯಿಂದ ನಜರ್ ಬಾದ್ ನವರೆಗೂ ಬೃಹತ್ ರೋಡ್ ಶೋ ನಡೆಸಿ ಮೈಸೂರು ತಾಲ್ಲೂಕು ಆಫೀಸ್ (ಮಿನಿ ವಿಧಾನಸೌಧ) ಚುನಾವಣಾ ಕಛೇರಿಗೆ ತೆರಳಿ ಪತ್ನಿ ಡಾ, ಪ್ರಗ್ಯ, ಮೇಯರ್ ಶಿವಕುಮಾರ್. ಗೆಜ್ಜಗಳ್ಳಿ ಮಹೇಶ್, ಬಿ ಎಂ ರಘು ಮುಂತಾದವರ ಜೊತೆ ತೆರಳಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಅರುಣ್ ಕುಮಾರ್ ಗೌಡ, ಮೈ,ವಿ, ರವಿಶಂಕರ್, ಶಿವಕುಮಾರ್, ಗೋಪಾಲರಾವ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಕವೀಶ್ ಗೌಡ ಬೆಂಬಲಿಗರು ಸಾಥ್ ನೀಡಿದರು.
Leave a Review