ಬೆಂಗಳೂರು: ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಿಕೆ ಸಹೋದರರನ್ನು ಬಿಜೆಪಿ ಹೈಕಮಾಂಡ್ ನಾಯಕರು ಗುರಿಯಾಗಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಇತ್ತೀಚೆಗೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಡಿಕೆ ಸಹೋದರರು ಶಕ್ತಿಶಾಲಿಗಳಾಗುತ್ತಿದ್ದಾರೆ. ಅವರನ್ನು ಈಗ ಟಾರ್ಗೆಟ್ ಮಾಡಲೇಬೇಕು. ಅವರಿಗೆ ಸೋಲಿನ ರುಚಿ ತೋರುವ ಮೂಲಕ ಪಾಠ ಕಲಿಸಬೇಕೆಂದು ಬಿಜೆಪಿ ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಖಾಡದಲ್ಲಿ ಸೋಲಿಸುವ ಮೂಲಕ, ಅವರಿಗೆ ದೊಡ್ಡ ಪ್ರಮಾಣದಲ್ಲಿ ಮುಜುಗರ ತರಿಸಿದ್ದ ಬಿಜೆಪಿ ಹೈಕಮಾಂಡ್ ನಾಯಕರು, ಈ ಬಾರಿ ಡಿಕೆ ಸಹೋದರರು ಗುರಿಯಾಗಿಸಿಕೊಂಡಿದ್ದಾರೆ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ ಡಾ.ಸಿ. ಎನ್.ಮಂಜುನಾಥ್ ರಂಗಪ್ರವೇಶ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಶಕಗಳಿಂದ ಡಾ.ಸಿ.ಎನ್. ಮಂಜುನಾಥ್ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಅವರಿಂದಲೂ ಡಿಕೆ ಸಹೋದರರ ಕಟ್ಟಿ ಹಾಕುವುದು ಹೈಕಮಾಂಡ್ ನಾಯಕರ ತಂತ್ರವಾಗಿದೆ.ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬದಲಾವಣೆಯಾಗಿದ್ದು, ಆರ್.ಅಶೋಕ್ ಬದಲಿಗೆ ಡಾ.ಸಿ. ಎನ್. ಅಶ್ವತ್ಥ್ನಾರಾಯಣ್ ಅವರಿಗೆ ಬಿಜೆಪಿ ಹೈಕಮಾಂಡ್ ನಾಯಕರು ಮಣೆ ಹಾಕಿದ್ದಾರೆ. ಈ ಮೂಲಕ ಕಳೆದ ಬಾರಿ ಖರ್ಗೆ, ಈ ಬಾರಿ ಡಿಕೆ ಸಹೋದರರು ಹಣೆಯುವುದು ಬಿಜೆಪಿ ನಾಯಕರ ಒನ್ಲೈನ್ ಅಜೆಂಡಾ ಆಗಿದೆ ಎನ್ನಲಾಗಿದೆ.
ಕಳೆದ ಬಾರಿ ಲೋಕಸಭೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನುಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಹೇಗಾದರೂ ಮಾಡಿ ಸೋಲಿಸಲೇ ಬೇಕು ಎಂದು ಪಣತೊಟ್ಟ ಕೇಂದ್ರ ಬಿಜೆಪಿ ನಾಯಕರು ಉಮೇಶ್ ಜಾದವ್ ಅವರನ್ನು ಕಾಂಗ್ರೆಸ್ನಿಂದ ಬಿಜೆಪಿಗೆ ಸೆಳೆದು ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸುವಂತೆ ಮಾಡಿದ್ದರು.
ಆ ಚುನಾವಣೆಯಲ್ಲಿ ಖರ್ಗೆ ಪರಾಭವಗೊಳ್ಳುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಖರ್ಗೆ ಹಿನ್ನೆಡೆ ಅನುಭವಿಸುವಂತೆ ಆಗಿತ್ತು. ಅದೇ ರೀತಿ ಈ ಬಾರಿ ಡಿಕೆ ಸಹೋದರರಿಗೆ ಸೋಲಿನ ರುಚಿ ತೋರಿಸಬೇಕು ಎಂದು ಕೇಂದ್ರ ಬಿಜೆಪಿ ನಾಯಕರು ನಿಧರಿಸಿದ್ದಾರೆ ಎನ್ನಲಾಗಿದೆ.