ಬೆಂಗಳೂರು: ಜೂನ್ 13 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಇಂದು ಬಿಜೆಪಿ ಕೋರ್ ಕಮಿಟಿ ಸದಸ್ಯರು ಸಭೆ ಸೇರಲಿದ್ದಾರೆ. ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಿಗದಿಯಾಗಿದ್ದು, ಸಂಜೆ 4 ಘಂಟೆಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.
ಸಭೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಬೇಕಾದ ಅಭ್ಯರ್ಥಿಗಳನ್ನು ಹೈಕಮಾಂಡ್ ನಾಯಕರಿಗೆ ಶಿಫಾರಸ್ಸು ಮಾಡಲು ನಾಯಕರು ಸಭೆ ಸೇರಲಿದ್ದಾರೆ.
ಸದ್ಯ ವಿಧಾನಪರಿಷತ್ನಲ್ಲಿ ಒಟ್ಟು 11 ಮಂದಿ ಸದಸ್ಯರಿಂದ ತೆರವಾಗಲಿದ್ದು, ಆ 11 ಸ್ಥಾನಗಳ ಪೈಕಿ ಸಂಖ್ಯಾ ಬಲಾಬಲದ ಮೇಲೆ ಕಾಂಗ್ರೆಸ್ಗೆ 7 ಸ್ಥಾನ ಸಿಗುವುದು ನಿಶ್ಚಿತ. ಬಾಕಿ ಉಳಿಯುವ 4 ಸ್ಥಾನವನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಎದುರಿಸುವ ಕಾರಣ, ಬಿಜೆಪಿಗೆ 3, ಜೆಡಿಎಸ್ಗೆ 1 ಸ್ಥಾನ ಲಭಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಸಭೆ ನಿಗದಿಯಾಗಿದೆ.
3 ಮಂದಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್ ನಾಯಕರಿಗೆ ಪಟ್ಟಿ ರವಾನೆ ಮಾಡಲಿದ್ದಾರೆ ಕೋರ್ ಕಮಿಟಿ ಸದಸ್ಯರು.
ಬಿಜೆಪಿಯಲ್ಲಿನ ಮೂರು ಸ್ಥಾನಗಳಿಗೆ ಪ್ರದೇಶವಾರು, ಸಮುದಾಯದ ಆಧಾರ, ಹಿರಿತನ, ಪಕ್ಷಕ್ಕಾಗಿ ದುಡಿದವರು, ಸಂಘ ಪರಿವಾರದ ಹಿನ್ನೆಲೆ, ಪಕ್ಷ
ನಿಷ್ಠೆ ಮಾನದಂಡದ ಆಧಾರದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇದರ ಜೊತೆಗೆ ಮಹಿಳಾ ಪ್ರಾತಿನಿಧ್ಯತೆಗೂ ಒತ್ತು ಸಿಗುವ ನಿರೀಕ್ಷೆಯಿದ್ದು, ಬಿಜೆಪಿಗೆ ಸಿಗಲಿರುವ ಮೂರು ಸ್ಥಾನಗಳ ಪೈಕಿ 2 ಪುರುಷರು, 1 ಮಹಿಳಾ ಖೋಟಾದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಾಧ್ಯತೆಯಿದೆ.ಇಂದು ಬಿಜೆಪಿ ಕೋರ್ ಕಮಿಟಿ ಸಭೆಬೆಂಗಳೂರು: ಜೂನ್ 13 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಇಂದು ಬಿಜೆಪಿ ಕೋರ್ ಕಮಿಟಿ ಸದಸ್ಯರು ಸಭೆ ಸೇರಲಿದ್ದಾರೆ. ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಿಗದಿಯಾಗಿದ್ದು, ಸಂಜೆ 4 ಘಂಟೆಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.
ಸಭೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಬೇಕಾದ ಅಭ್ಯರ್ಥಿಗಳನ್ನು ಹೈಕಮಾಂಡ್ ನಾಯಕರಿಗೆ ಶಿಫಾರಸ್ಸು ಮಾಡಲು ನಾಯಕರು ಸಭೆ ಸೇರಲಿದ್ದಾರೆ.ಸದ್ಯ ವಿಧಾನಪರಿಷತ್ನಲ್ಲಿ ಒಟ್ಟು 11 ಮಂದಿ ಸದಸ್ಯರಿಂದ ತೆರವಾಗಲಿದ್ದು, ಆ 11 ಸ್ಥಾನಗಳ ಪೈಕಿ ಸಂಖ್ಯಾ ಬಲಾಬಲದ ಮೇಲೆ ಕಾಂಗ್ರೆಸ್ಗೆ 7 ಸ್ಥಾನ ಸಿಗುವುದು ನಿಶ್ಚಿತ. ಬಾಕಿ ಉಳಿಯುವ 4 ಸ್ಥಾನವನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಎದುರಿಸುವ ಕಾರಣ, ಬಿಜೆಪಿಗೆ 3, ಜೆಡಿಎಸ್ಗೆ 1 ಸ್ಥಾನ ಲಭಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಇಂದು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಸಭೆ ನಿಗದಿಯಾಗಿದೆ.3 ಮಂದಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್ ನಾಯಕರಿಗೆ ಪಟ್ಟಿ ರವಾನೆ ಮಾಡಲಿದ್ದಾರೆ ಕೋರ್ ಕಮಿಟಿ ಸದಸ್ಯರು.ಬಿಜೆಪಿಯಲ್ಲಿನ ಮೂರು ಸ್ಥಾನಗಳಿಗೆ ಪ್ರದೇಶವಾರು, ಸಮುದಾಯದ ಆಧಾರ, ಹಿರಿತನ, ಪಕ್ಷಕ್ಕಾಗಿ ದುಡಿದವರು, ಸಂಘ ಪರಿವಾರದ ಹಿನ್ನೆಲೆ, ಪಕ್ಷ ನಿಷ್ಠೆ ಮಾನದಂಡದ ಆಧಾರದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.ಇದರ ಜೊತೆಗೆ ಮಹಿಳಾ ಪ್ರಾತಿನಿಧ್ಯತೆಗೂ ಒತ್ತು ಸಿಗುವ ನಿರೀಕ್ಷೆಯಿದ್ದು, ಬಿಜೆಪಿಗೆ ಸಿಗಲಿರುವ ಮೂರು ಸ್ಥಾನಗಳ ಪೈಕಿ 2 ಪುರುಷರು, 1 ಮಹಿಳಾ ಖೋಟಾದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಾಧ್ಯತೆಯಿದೆ.