This is the title of the web page
This is the title of the web page

ಎಂಇಪಿಗೆ ಬಿಜೆಪಿ- ಜೆಡಿಎಸ್ ನಾಯಕರು ಸೇರ್ಪಡೆ

ಬೆಂಗಳೂರು: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗೆ ಅಖಿಲ ಭಾರತ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಕರ್ನಾಟಕ ಘಟಕಕ್ಕೆ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದೆ. ಅಬ್ದುಲ್ ರಹಮಾನ್ (ಬಿಜೆಪಿ ಕರ್ನಾಟಕ ಕಾರ್ಯಕಾರಿ ಸದಸ್ಯ) ಮತ್ತು ಡಾ.ಪುಷ್ಪಲತಾ (ಜೆಡಿಎಸ್ ನಾಯಕಿ) ಅವರ ಹೆಸರನ್ನು ಪಕ್ಷದ ಪ್ರಾದೇಶಿಕ ಪಕ್ಷದ ಉಸ್ತುವಾರಿ ಫರೀದಾ ಬೇಗಂ ಅವರು ಔಪಚಾರಿಕ
ವಾಗಿ ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಭಿನ್ನಮತೀಯರಿಂದ ಎಂಇಪಿಗೆ ಸೇರ್ಪಡೆ ಅಭಿಯಾನ ನಡೆಯಲಿದ್ದು, ನಂತರ ಡಾ.ಅಬ್ದುಲ್ ರಹಮಾನ್ ಅವರು ಎಂಇಪಿ ಪಕ್ಷಕ್ಕೆ ಸಾಮೂಹಿಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದು ‘ರೋಮಾಂ
ಚಕ ಕರ್ನಾಟಕ’ ಧ್ಯೇಯದೊಂದಿಗೆ ರಾಜ್ಯದಲ್ಲಿ ಎಂಇಪಿ ರಾಜಕೀಯ ಎಂಟ್ರಿಯನ್ನು ಪಡೆಯಲಿದೆ. ಇದು ಮುಂಬರುವ ಚುನಾವಣೆಗೆ ಪಕ್ಷದ ಘೋಷವಾಕ್ಯವೂ ಆಗಲಿದೆ.

ಎಂಇಪಿ ಕಾರ್ಯಕಾರಿ ಪ್ರಧಾನ ಕಾರ್ಯದರ್ಶಿ ಮುತ್ತು ಸುರಕೊಂಡ ಅವರು ರಾಷ್ಟ್ರೀಯ ಕಾರ್ಯಕಾರಿ ಉಪಾಧ್ಯಕ್ಷೆ ಫರೀದಾ ಬೇಗಂ ಅವರೊಂದಿಗೆ ಸ್ವಾಗತ ಭಾಷಣ ಮಾಡಲಿದ್ದಾರೆ, ನಂತರ ಬಿಜೆಪಿ ಮತ್ತು ಜೆಡಿಎಸ್ ಪದಾಧಿಕಾರಿ ಗಳು ಮತ್ತು ಸದಸ್ಯರನ್ನು ಎಂಇಪಿಗೆ ಸೇರಿಸಿಕೊಳ್ಳಲಾಗುವುದು, ಈ ಬಳಿಕ ಪಕ್ಷದ ಕಾರ್ಯಸೂಚಿಯಂತೆ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ಅಬ್ದುಲ್ ರಹಮಾನ್ ಅವರು ಮಾತನಾಡಿದರು.

ಎಂಇಪಿಯಿಂದ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಸ್ಪರ್ಧೆಯನ್ನು ನಡೆಸಲಿದೆ. ಅಲ್ಲದೇ ಗೆಲ್ಲುವ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶೇ.51ರಷ್ಟು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿಡಲಿದ್ದು, ದಲಿತ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯನ್ನು ಎಂಇಪಿ ಹೊಂದಲಾಗಿದೆ.

ಪಕ್ಷವು ಮೂರು ವಿಭಿನ್ನ ಹಂತಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ವರ್ಚುವಲ್ ರಿಯಾಲಿಟಿಯಾದ ಪ್ರಾಯೋಗಿಕ ಪ್ರಣಾಳಿಕೆಯನ್ನು ಸಹ ಪಟ್ಟಿ ಮಾಡುವ ಸಾಧ್ಯತೆಯಿದೆ. ಆ ನಿಟ್ಟಿನಲ್ಲಿಯೆ ಎಂಇಪಿ ಪಕ್ಷದ ಮುಖ್ಯಸ್ಥ ಡಾ.ನೌಹೆರಾ ಶೇಖ್ ಅವರು ಕಣ್ಣು ನೆಟ್ಟಿದ್ದಾರೆ. ಕರ್ನಾಟಕದ ಜಿಲ್ಲೆಗಳಲ್ಲಿ ಹರಡಿರುವ ಭೌಗೋಳಿಕ ಗಡಿಗಳನ್ನು ದಾಟುವ ಎಲ್ಲಾ ಪ್ರಮುಖ ರ್ಯಾಲಿಗಳಲ್ಲಿ ಅವರು ಭಾಗವಹಿಸಿ, ಪ್ರಚಾರ ನಡೆಸಲಿದ್ದಾರೆ.

ಇಂದಿನ ಸುದ್ದಿಗೋಷ್ಠಿಯಲ್ಲಿ ಎಂಇಪಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮುಹಮ್ಮದ್ ಇಫ್ತಿಖಾರ್ ಶರೀಫ್, ಕೋರ್ ಕಮಿಟಿ ಸದಸ್ಯರಾದ ಮುಹಮ್ಮದ್ ಜಾವೇದ್ ಇಬ್ರಾಹಿಂ, ಆರಿಫ್ ಎಂ.ಪಿ., ಮುಹಮ್ಮದ್ ವಸೀಂ, ಗುಲ್ರೇಜ್ ಪಾಷಾ, ರಾಜ್ಯ ಸದಸ್ಯರಾದ ಇಮ್ರಾನ್, ಎಂ.ಎಸ್.ನೂರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.