ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ರೂ, ಬಿಜೆಪಿಗೆ ತಲೆ ಬಿಸಿ ತಪ್ಪಿಲ್ಲ.
ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಸಂಕಷ್ಟ ಎದುರಾಗಿದ್ದು, 100% ಗೆಲುವು ಆಗಲಿದೆ ಎಂಬುದಕ್ಕಿಂತ ಬಹುತೇಕ ಕಡೆ 50:50 ಅವಕಾಶಗಳೇ ಎಲ್ಲೆಡೆ ಕಂಡುಬರುತ್ತಿದೆ.ಗೆಲುವು ಸಾಧಿಸಿದರು ಸಾಧಿಸಬಹುದು ಅಥವಾ ಬಿಜೆಪಿಗೆ ಆ ಕ್ಷೇತ್ರಗಳಲ್ಲಿ ಹಿನ್ನಡೆಯಾದ್ರೂ ಆಗಬಹುದು ಎಂಬ ಲೆಕ್ಕಾಚಾರ ತಲೆಬಿಸಿಗೆ ಕಾರಣವಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ ಶೇ. 50 : 50ರಷ್ಟು ಮತಗಳಿಸುವ ಕ್ಷೇತ್ರ ಹಾಗೂ ಅಭ್ಯರ್ಥಿಗಳೆಂದರೆ, ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್ v/s ಡಾ.ಸಿ. ಎನ್.ಮಂಜುನಾಥ್., ತುಮಕೂರು – ಎಸ್.ಪಿ. ಮುದ್ದುಹನುಮೇಗೌಡ v/s ವಿ. ಸೋಮಣ್ಣ., ಉಡುಪಿ – ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ v/s ಕೋಟ ಶ್ರೀನಿವಾಸಪೂಜಾರಿ., ದಾವಣಗೆರೆ – ಡಾ.ಪ್ರಭಾ ಮಲ್ಲಿಕಾರ್ಜುನ್ v/s ಗಾಯಿತ್ರಿ ಸಿದ್ದೇಶ್ವರ್., ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ v/s ಅಣ್ಣಾಸಾಹೇಬ್ ಜೊಲ್ಲೆ.,
ಬೀದರ್ – ರಾಜಶೇಖರ ಪಾಟೀಲ್ ಹುಮ್ನಾಬಾದ್ v/s ಭಗವಂತ ಖೂಬಾ. ಕೊಪ್ಪಳ – ರಾಘವೇಂದ್ರ ಹಿಟ್ನಾಳ್ v/s ಡಾ.ಬಸವರಾಜ ಕ್ಯಾವಟರ್., ಬಳ್ಳಾರಿ – ವಿ.ಎಸ್. ಉಗ್ರಪ್ಪ v/s ಬಿ.ಶ್ರೀರಾಮುಲು., ಹೀಗೆ ಘೋಷಣೆಯಾಗಿರುವ 20 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಿಜೆಪಿಗೆ 50:50 ಚಾನ್ಸ್ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಹೀಗೆ ಆಗಲು ಕಾರಣಗಳೆಂದರೆ, ಹೊಸಮುಖದ ಅಭ್ಯರ್ಥಿಗಳ ಆಯ್ಕೆ ಮತ್ತು ಆಖಾಡದಲ್ಲಿರುವುದು. ಕ್ಷೇತ್ರದಲ್ಲಿನ ಬಂಡಾಯ., ಚುನಾವಣೆ ಎದುರಿಸಿ ಅನುಭವವಿಲ್ಲದೇ ಇರುವುದು., ಅತಿಯಾದ ಆತ್ಮವಿಶ್ವಾಸ., ಕೇವಲ ರಾಷ್ಟ್ರೀಯ ನಾಯಕರನ್ನೇ ನಂಬಿ ಆಖಾಡಕ್ಕೆ ಧುಮುಕಿರುವುದು ಎಂದು ಹೇಳಲಾಗಿದೆ.