ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಆರ್ಎಸ್ಎಸ್ v/s ಪ್ರಿಯಾಂಕ್ ಖರ್ಗೆ ಸಂಘರ್ಷ ವಿಚಾರ. ನವೆಂಬರ್ ೨ ರಂದು ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ ಪ್ಲಾನ್. ಆ ಪಥಸಂಚಲನಕ್ಕೆ ರಾಜ್ಯದ ಬಿಜೆಪಿ ನಾಯಕರು ಸಾಥ್.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ಬಿಜೆಪಿ ನಾಯಕರುಗಳು ಸಾಥ್.
ನವೆಂಬರ್ ೧ ರಂದೇ ರಾತ್ರಿ ಚಿತ್ತಾಪುರ ತಲುಪಿ, ನವೆಂಬರ್ ೨ ರ ಬಳಿಕ ಬೆಳಿಗ್ಗೆ ಪಥಸಂಚಲನದಲ್ಲಿ ಭಾಗಿಯಾಗಲು ನಿರ್ಧಾರ.
ಪಥಸಂಚಲನದ ಬಳಿಕ ಅಲ್ಲೇ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಬಿಜೆಪಿ ನಾಯಕರು ಪ್ಲಾನ್. ಬೆಳಿಗ್ಗೆ ಪಥಸಂಚಲನ, ಮಧ್ಯಾಹ್ನ ಸಮಾವೇಶ ನಡೆಸಲು ಪ್ಲಾನ್. ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ೫ ಲೋಕಸಭಾ ಕ್ಷೇತ್ರ, ೪೧ ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲು ಸಜ್ಜಾಗಿರುವ ಬಿಜೆಪಿ ನಾಯಕರು. ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟ ಬಿಜೆಪಿ ನಾಯಕರು. ಇದೇ ಕಾರ್ಯಕ್ರಮದ ರೂಪುರೇಷೆಗೆ ದೀಪಾವಳಿ ಬಳಿಕ ಸಭೆ ನಡೆಸಿ, ಕಾರ್ಯಕ್ರಮದ ಪ್ಲಾನ್ ರೂಪಿಸಲಿರುವ ನಾಯಕರುಗಳು.