ಬೆಂಗಳೂರು: ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಅಗತ್ಯ ಬಹುಮತಗಳಿಸಿರುವ ಭಾರತೀಯ ಜನತಾ ಪಕ್ಷ ಆಯಾ ರಾಜ್ಯಗಳ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರುಗಳ ಆಯ್ಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರನ್ನು ನೇಮಿಸಿದೆ.
ರಾಜಸ್ಥಾನಕ್ಕೆ ಕೇಂದ್ರ ಸಚಿವ ರಾಜನಾಥಸಿಂಗ್, ಸಂಸದ ಸರೋಜ್ಪಾಂಡೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿನೋಧ್ ತಾವಡೆ, ಮಧ್ಯ ಪ್ರದೇಶಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಕಟ್ಟರ್, ರಾಷ್ಟ್ರೀಯ ಓಬಿಸಿ ಮೋರ್ಚಾ ಅಧ್ಯಕ್ಷ ಡಾ. ಕೆ.ಲಕ್ಷ್ಮಣ್, ರಾಷ್ಟ್ರೀಯ ಕಾರ್ಯದರ್ಶಿ ಲಕ್ಷ್ಮಿ ಆಶಾ ಲಾಕಡಾ, ಚತ್ತೀಸ್ಘಡಕ್ಕೆ ಅರ್ಜುನ್ಮುಂಡಾ, ಸರ್ಬಾನಂದ್ ಸೋನಾವಾಲ್, ದುಶ್ಯಂತ್ಕುಮಾರ್ ಗೌತಮ್ ಅವರುಗಳನ್ನು ಮುಖ್ಯಮಂತ್ರಿಗಳ ಆಯ್ಕೆಗಾಗಿ ವೀಕ್ಷಕರನ್ನಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ಸಿಂಗ್ ನೇಮಿಸಿ ಆದೇಶ ಹೊರಡಿಸಿದ್ದಾರೆ.