ತಿ.ನರಸೀಪುರ: 2000 ಇಸವಿಯಲ್ಲಿಯ ಭಾಜಪ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನ ದಲಿತ ನಾಯಕ ಬಂಗಾರ ಲಕ್ಷ್ಮಣನಿಗೆ ನೀಡಿತ್ತು. ಆದರೆ ದಲಿತರ ಮತ ಪಡೆದು 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಈಗ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿದೆ ಎಂಬುದನ್ನು ಮರೆಯಬಾರದು ಎಂದು ಎಸ್. ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಸಿ. ಎಂ. ಮಹದೇವಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಎಸ್ಸಿ ಮೋರ್ಚಾದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚೆಗೆ ವರುಣಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಸ್.ಸಿ. ಮೋರ್ಚಾದ ಕೆಲವು ಫಲಾನುಭವಿ ಗಳು ಭಾಜಪದಲ್ಲಿ ದಲಿತರಿಗೆ ಅನ್ಯಾಯ ವಾಗುತ್ತಿದೆ ಎಂದು ಮಾತನಾಡಿದ್ದಾರೆ ಈ ದೇಶದ ನೆಲದಲ್ಲಿ ಎಪ್ಪತ್ತು ವರ್ಷ ರಾಜಕೀಯ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಇತ್ತೀಚಿಗೆ ದಲಿತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದೆ ಆದರೆ 2000 ಇಸವಿಯಲ್ಲಿ ಬಿಜೆಪಿ ಪಕ್ಷ ಬಂಗಾರ್ ಲಕ್ಷಣ್ ಎಂಬ ದಲಿತ ನಾಯಕನನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಮಾಜೀಕ ನ್ಯಾಯ ಎತ್ತಿಹಿಡಿದಿದೆ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ಕೆಲವು ಸ್ವಾರ್ಥ ಮುಖಂಡರು ಪಕ್ಷದ ಫಲಾನುಭವಿಗಳಾಗಿದ್ದರು ಸಹ ಕಾಂಗ್ರೆಸ್ ಪಕ್ಷದ ಆಮಿಷಕ್ಕೆ ಒಳಗಾಗಿ ಪಕ್ಷದ ಬಗ್ಗೆ ಕೆಟ್ಟದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ್ದಾರೆ ಬಿಜೆಪಿ ಪಕ್ಷದಲ್ಲಿ ದಲಿತರಿಗೆ ಉನ್ನತ ಸ್ಥಾನಮಾನಗಳಿಲ್ಲ ಕೋರ್ ಕಮಿಟಿಯಲ್ಲಿ ಅವಕಾಶ ಇಲ್ಲಾ ದಲಿತ ಮುಖಂಡರು ಮನೆ ಮನೆಗೆ ಬಾವುಟ ಕಟ್ಟುವುದಕ್ಕೆ ಮಾತ್ರ ಸೀಮಿತವಾಗಿಟ್ಟಿದ್ದಾರೆ ಎಂದು ಪುಂಕಾನುಪುಂಕವಾಗಿ ಮಾತನಾಡಿದ್ದಾರೆ ಹಾಗಾದರೆ ಇವರು ಯಾವ ಪಕ್ಷದಿಂದ ತಾ.ಪಂ.ಸದಸ್ಯರಾದರು,ಯಾವ ಪಕ್ಷದಿಂದ ತಿ.ನರಸೀಪುರ ಪುರಸಭೆಗೆ ನಾಮ ನಿರ್ದೇಶಿತ ಸದಸ್ಯರಾದರು,ಯಾವ ಪಕ್ಷದಿಂದ ತಾ.ಪಂ. ಕೆಡಿಪಿಗೆ ಸದಸ್ಯರಾದರು ಎಂಬುದನ್ನ ಮೊದಲು ಹೇಳಿ ನಂತರ ಪಕ್ಷದ ಸಾಮಾಜಿಕ ನ್ಯಾಯವನ್ನ ಪ್ರಶ್ನಿಮಾಡಲಿ ಎಂದು ಲೆವಡಿ ಮಾಡಿದರು.
ಕೃಷ್ಣ ಮೂರ್ತಿಯವರಿಗೆ ಟಿಕೆಟ್ ನೀಡಿ ಗೆಲ್ಲಿಸಿ ತಾ.ಪಂ. ಅಧ್ಯಕ್ಷ ರನ್ನಾಗಿ ಮಾಡಿದೆ ಗಣೇಶ್ ರವರನ್ನು ತಿ.ನರಸೀಪುರ ಪುರಸಭೆಗೆ ನಾಮ ನಿರ್ದೇಶಿತ ಸದಸ್ಯನನ್ನಾಗಿ ಮಾಡಿದೆ.ಮಿಥುನ್ ರವರನ್ನ ತಾ.ಪಂ.ಕೆಡಿಪಿ ಸದಸ್ಯರನ್ನಾಗಿ ಮಾಡಿದೆ.
ಶ್ರೀಧರ್ ದಂಡಿಕೆರೆ ರವರನ್ನು ಭೂನ್ಯಾಯ ಮಂಡಳಿ ಸದಸ್ಯರನ್ನಾಗಿ ಮಾಡಿದೆ ಕಳೆದ ಬಾರಿ ಶಿವಯ್ಯರವರನ್ನು ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿದೆ ಈಗೆ ಪ್ರತಿಯೊಂದು ಹಂತದಲ್ಲೂ ದಲಿತರಿಗೆ ನ್ಯಾಯ ಕೊಟ್ಟಿರುವ ಪಕ್ಷ ಭಾಜಪ ಪಕ್ಷ ಎಂದರು.
ಕೆಲವರು ತಮ್ಮ ವೈಯಕ್ತಿಕ ಕೆಲಸಗಳಾಗಿಲ್ಲ ಎಂದು ಬಿಜೆಪಿ ಪಕ್ಷದ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತಿದೆ ಇದು ಅವರಿಗೆ ಯಶಸ್ಸು ನೀಡಲ್ಲ ವರುಣಾ ಕ್ಷೇತ್ರದ ಎಸ್.ಸಿ. ಮೋರ್ಚಾ ಸದಸ್ಯರೆಲ್ಲರೂ ರಾಜೀನಾಮೆ ನೀಡುತಿದ್ದೇವೆ ಎಂದು ಪಕ್ಷಕ್ಕೆ ಸಂಬಂಧಿಸಿ ದಲ್ಲದವರನ್ನು ಕರೆತಂದು ಪೋಟೊಗೆ ನಿಲ್ಲಿಸಿ ಹೇಳಿಕೆ ನೀಡಿದ್ದಾರೆ ಇದು ಸುಳ್ಳು ಕೆವಲ ನಾಲ್ಕರಿಂದ ಐದು ಜನ ಸ್ವಾರ್ಥಿಗಳು ಕಾಂಗ್ರೆಸ್ ಆಮೀಷಕ್ಕೆ ಬಿದ್ದು ರಾಜೀನಾಮೆ ನೀಡಿ ಹೋಗುತಿದ್ದಾರೆ ಇವರು ಕೆಲವೇ ದಿನಗಳು ಮಾತ್ರ ಆ ಪಕ್ಷದಲ್ಲಿ ಇರುತ್ತಾರೆ ಮತ್ತೆ ಇವರಿಗೆ ನಮ್ಮ ಪಕ್ಷದ ಪಾದವೇ ಗತಿ ಎಂದು ವ್ಯಂಗ್ಯವಾಡಿದರು.
ಮಾಜಿ ಕ್ಷೇತ್ರಾಧ್ಯಕ್ಷ ಶಿವಯ್ಯ ಮಾತನಾಡಿ ಬಿಜೆಪಿ ಪಕ್ಷ ದೇಶದ ರಾಜಕೀಯ ಪಕ್ಷಗಳಲ್ಲೇ ಅತಿ ಹೆಚ್ಚು ಸದಸ್ಯರನ್ನ ಹೊಂದಿರುವ ಪಕ್ಷ ಸಾಮಾಜೀಕ ನ್ಯಾಯದಲ್ಲಿ ಭಾಜಪ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಛ ಲವಾದಿ ನಾರಯಣ ಸ್ವಾಮಿ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ,ಕೋಟೆ ಶಿವಣ್ಣ ರವರನ್ನು ಕಫಾಯಿ ಕರ್ಮಚಾರಿ ಅಯೋಗದ ಅಧ್ಯರನ್ನಾಗಿ ಮಾಡಿದೆ ಇದಲ್ಲದೆ ಕೋರ್ ಕಮಿಟಿಯಲ್ಲೂ ಸ್ಥಾನ ನೀಡಿದೆ ಹೀಗೆ ಭಾಜಪ ದಲಿತರಿಗೆ ನ್ಯಾಯ ನೀಡಿದೆ ಹೀಗಿರುವಾಗ ಸುಖಾಸುಮ್ಮನೆ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್. ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ. ನಾಗೇಂದ್ರ,ಕೆಡಿಪಿ ಸದಸ್ಯ ಹಡಜನ ನರಸಿಂಹಮೂರ್ತಿ, ಭೂ. ನ್ಯಾ. ಮಂಡಳಿ ಅಧ್ಯಕ್ಷ ಶ್ರೀಧರ್ ದಂಡಿಕೆರೆ, ರಾಜ್ಯ ಎಸ್. ಸಿ. ಮೋರ್ಚಾ ಕಾರ್ಯಕಾರಿಣಿ ಅಧ್ಯಕ್ಷ ಕಾರ್ಯ ಮಹಾದೇವಯ್ಯ, ಗರ್ಗೆಶ್ವರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಆನಂದ್ ರಾಜು, ಎಸ್. ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ತಾ. ಪಂ. ಮಾಜಿ ಸದಸ್ಯ ಮಹದೇವಸ್ವಾಮಿ, ಎಸ್. ಸಿ. ಮೋರ್ಚಾ ಉಪಾಧ್ಯಕ್ಷ ಆಲಗೂಡು ಮಂಜು, ಮಾಜಿ ಎಸ್ಡಿಎಂಸಿ ಅಧ್ಯಕ್ಷ ಸಿ.ವಿಷ್ಣುಮೂರ್ತಿ ಹಳೆಗಂಚಿ, ಗ್ರಾ.ಪಂ. ಸದಸ್ಯ ಮಹದೇವಸ್ವಾಮಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಬಾಲರಾಜು ಬೈರಾಪುರ, ದಿಲೀಪ್ ಕುಮಾರ್, ಪುಟ್ಟ ಶಂಭಯ್ಯ, ಕೂಸಪ್ಪ ಕೋಣನೂರು, ಮಹೇಶ್ ಚಿಕ್ಕವಮ್ಮ, ಬಸವರಾಜು ತೋರವಳ್ಳಿ, ಮಹದೇವಯ್ಯ ಹೊಸಕೋಟೆ, ಸಿದ್ದರಾಜು, ಬಾಲು, ಸುಭಾಷ್ ಬೈರಾಪುರ, ವಿಷಕಂಠ ಮೂರ್ತಿ ಚುಂಚನಹಳ್ಳಿ, ಮಹದೇವಸ್ವಾಮಿ ಚೋರನಹಳ್ಳಿ ಹಾಗೂ ಮತ್ತಿತರರು ಹಾಜರಿದ್ದರು.
Leave a Review