ನವದೆಹಲಿ: ಭಾರತೀಯ ಜನತಾ ಪಾರ್ಟಿ ವತಿಯಿಂದ ಜನರ ಹಿತಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 44ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ವಿಡೀಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಇಂದು ಹನುಮ ಜಯಂತಿ. ಇಂದು ಬಜರಂಗ ಬಲಿಯ ಹೆಸರು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಹನುಮಂತ ಅಪಾರ ಶಕ್ತಿಯನ್ನು ಹೊಂದಿದ್ದಾನೆ.
ಹನುಮಂತ ಹೇಗೆ ರಾಕ್ಷಸರನ್ನು ಎದುರಿಸುತ್ತಿದ್ದನೋ ಹಾಗೆಯೇ ಬಿಜೆಪಿ ಕೂಡ ಭ್ರಷ್ಟಾಚಾರ ಹಾಗೂ ಪರಿವಾರದ, ಕಾನೂನು ಸುವ್ಯವಸ್ಥೆ ಬಗ್ಗೆ ಸಂಕಲ್ಪ ಬದ್ಧವಾಗುತ್ತದೆ. ಭಾರತ ಮಾತೆಯ ರಕ್ಷಣೆಗೆ ಬಿಜೆಪಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಭ್ರಷ್ಟಾಚಾರ ಮತ್ತು ಕೌಟುಂಬಿಕತೆಯ ವಿರುದ್ಧ ಹೋರಾಡಲು ಹನುಮಂತನಂತೆ ಗಟ್ಟಿಯಾಗಬೇಕು ಎಂದು ಹೇಳಿದರು.
ದೇಶ ಮೊದಲು ಎಂಬುದು ನಮ್ಮ ಮೊದಲ ಮಂತ್ರವಾಗಿದೆ. ಸಬ್‍ಕಾ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ, ಸಬ್‍ಕ ಪ್ರಯಾಸ್ ಧ್ಯೇಯಯೊಂದಿಗೆ ಮುನ್ನಡೆಯುತ್ತಿದ್ದೇವೆ. ಬಿಜೆಪಿ ವತಿಯಿಂದ ಸಾಮಾಜಿಕ ನ್ಯಾಯದ ಕೆಲಸ ಮಾಡಲಾಗುತ್ತಿದೆ.
ಕಾಂಗ್ರೆಸ್ ಪಕ್ಷ ಸಂಕುಚಿತ ಮನೋಭಾವದಿಂದಿದೆ. ಬಿಜೆಪಿ ಕೆಲ ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ.
ಅಧಿಕಾರಕ್ಕೆ ಬಂದ ನಂತರ 80 ಕೋಟಿ ಜನರಿಗೆ ರೇಷನ್ ಒದಗಿಸುವ ಕೆಲಸ ಮಾಡಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಮಾಡಿ ಗಲಾಟೆಗಳನ್ನು ನಿಯಂತ್ರಣ ಮಾಡಲಾಗಿದೆ ಎಂದು ಬಿಜೆಪಿಯ ಜನಪರ ಕೆಲಸ ಮತ್ತು ಆಡಳಿತ ಮಾಡುತ್ತಿರುವ ರೀತಿಯ ಬಗ್ಗೆ ವಿವರಿಸಿದ್ದಾರೆ.
Leave a Review