ಯಲಹಂಕ: ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಎಂಬಾತ ಜೈಲಿನಿಂದಲೇ ಯುವತಿಯ ನಗ್ನ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟು ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳೆದ ಆಗಸ್ಟ್ನಲ್ಲಿ ಯುವತಿ ತಾಯಿಗೆ ಫೋಟೋ ಕಳಿಸಿ 40, ಸಾವಿರ ವಸೂಲಿ ಮಾಡಿದ್ದ ನಂತರ ಫೆಬ್ರವರಿ 9ರಂದು ಮನು ಸಹಚರ ಕಾರ್ತಿಕ್ ವಾಟ್ಸಪ್ ಕರೆ ಮಾಡಿ 5 ಲಕ್ಷ ಕೊಡದಿದ್ದರೆ ಫೋಟೋ ನಿನ್ನ ಅಳಿಯನಿಗೆ ಕಳಿಸ್ತೀನಿ ಅಂತ ಬೆದರಿಕೆ ಹಾಕಿದ್ದ.
ಫೆಬ್ರವರಿ 12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಹಣ ನೀಡುವಂತೆ ಧಮ್ಕಿ ಹಾಕ್ಕಿದ್ದಾನೆ.
ಫೋಟೋ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಅಂತ ಯುವತಿ ತಾಯಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಈ ಘಟನೆ ಸಂಬಂಧ ಐಟಿ ಆಕ್ಟ್ 67, ಐಪಿಸಿ ಸೆಕ್ಷನ್ 34ಹಾಗೂ 384 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಜೈಲಿನಲ್ಲಿರುವ ರೌಡಿಶೀಟರ್ ಮನು ನನ್ನ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ.