This is the title of the web page
This is the title of the web page

ಜಮ್ಮು-ಕಾಶ್ಮೀರದಲ್ಲಿ ಸ್ಫೋಟ

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಹಿರಾನಗರದ (ಕತುವಾ) ಸನ್ಯಾಲ್‍ನಲ್ಲಿರುವ ಭಾರತ-ಪಾಕ್ ಗಡಿಗಿಂತ ನಾಲ್ಕು ಕಿಲೋಮೀಟರ್ ದೂರಳತೆಯಪೊಲೀಸ್ ಪೋಸ್ಟ್ ಬಳಿ ಅರಣ್ಯ ಪ್ರದೇಶದಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸಪ್ಪಳವು ಹತ್ತಿರದ ನಾಲ್ಕೈದು ಹಳ್ಳಿಗಳಿಗೆ ಕೇಳಿಸಿದೆ.

ಘಟನೆ ನಡೆದ ಬಳಿಕ ಕತುವಾಗೆ ಎಸ್‍ಎಸ್‍ಪಿ ಶಿವದೀಪ್ ಸಿಂಗ್ ಜಮ್ವಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಸ್ಫೋಟ ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಕುರಿತು ತನಿಖೆ ನಡೆಯುತ್ತಿದೆ. ಸ್ಫೋಟದಲ್ಲಿ ಒಬ್ಬಪೊಲೀಸ್ ಗಾಯಗೊಂಡಿರುವ ವರದಿಯಾಗಿದೆ, ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಸಿಆರ್‍ಪಿಎಫ್, ಪೊಲೀಸರು ಮತ್ತು ಎಸ್‍ಒಜಿ ಯೋಧರು ತಡರಾತ್ರಿ ಇಡೀ ಪ್ರದೇಶದಲ್ಲಿ ದಿಗ್ಬಂಧನ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಳೆ ಕತುವಾ-ಸಾಂಬಾ ಮಾರ್ಗವನ್ನು ನಿಷೇಧಿಸಲಾಗಿದೆ.

ರಾತ್ರಿ 9:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಹೀರಾನಗರದ ಬಿಡಿಸಿ ಅಧ್ಯಕ್ಷ ರಾಮಲಾಲ್ ಕಾಲಿಯಾ ಮತ್ತು ಸ್ಥಳೀಯ ಜನರು ತಿಳಿಸಿದ್ದಾರೆ. ಸ್ಥಳದಿಂದ ಸುಮಾರು 20 ಮೀಟರ್ ದೂರದಲ್ಲಿ ಗಡಿ ಪೊಲೀಸ್ ಠಾಣೆ ಇದೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಸಮೀಪದಲ್ಲೇ ಸೇತುವೆಯೂ ಇದ್ದು, ಸುತ್ತಮುತ್ತಲಿನ ಹೊಲಗಳಲ್ಲಿ ಬೆಳೆ ಬೆಳೆಯಲಾಗಿದೆ.

ಮೂಲಗಳ ಪ್ರಕಾರ, ಇದು ಐಇಡಿಯಂತೆ ಕಾಣುತ್ತದೆ, ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಸ್ಫೋಟ ಸಂಭವಿಸಿದ ನಂತರ ಇಡೀ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ, ಸಮೀಪದ ಹೆದ್ದಾರಿಗಳಲ್ಲೂ ಅಲರ್ಟ್ ಘೋಷಿಸಲಾಗಿದೆ.