ಚಾಮರಾಜನಗರ: ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿಂದು ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಇಂದು ರಕ್ತದಾನ ಶಿಬಿರ ನಡೆದಿದ್ದು, ೬೦ ವಿದ್ಯಾರ್ಥಿಗಳು ಭಾಗವಹಿಸಿ, ೩೬ ಯೂನಿಟ್ ರಕ್ತ ಸಂಗ್ರಹಣೆಯಾಗಿದೆ. ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದ ಸಿ.ಐ.ಎಂ.ಎಸ್. ರಕ್ತನಿಧಿ ಅಧಿ ಕಾರಿ ಡಾ. ದಿವ್ಯ ಅವರು ರಕ್ತದಲ್ಲಿ ಕಬ್ಬಿಣದ ಶೇಖರಣೆ ತಡೆಯಲು ರಕ್ತದಾನ ಉತ್ತಮವಾಗಿದೆ ಎಂದು ಸಲಹೆ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಮಧು ಅವರು ಮಾತನಾಡಿ ಹೃದಯದ ಆರೋಗ್ಯ, ಕಬ್ಬಿಣದ ಮಟ್ಟ ನಿಯಂತ್ರಣ, ಮೆಟೊಪಾಲಿಕ್ ಸಿಂಡ್ರೋ ವಿಷಕಾರಿ ರಾಸಾಯನಿಕಗಳ ನಿಯಂತ್ರಣ ರಕ್ತದಾನದಿಂದ ಸಾಧ್ಯವಾಗಲಿದೆ. ಅಲ್ಲದೇ ಮತ್ತೊಂದು ಜೀವ ಉಳಿಸಲು ರಕ್ತದಾನ ಶ್ರೇಷ್ಠವಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಸ್.ಎನ್. ದೇವೇಂದ್ರ ಕುಮಾರ್, ಸಹ ಪ್ರಾಧ್ಯಾಪಕರಾದ ಡಾ. ಇಮ್ರಾನ್ ಖಾನ್, ಡಾ. ಟಿ. ಲೋಕೇಶ, ಡಾ. ಪಿ.ಸಿ. ಶ್ರೀನಿವಾಸ್, ರೆಡ್ ಕ್ರಾಸ್ ಸಂಯೋಜಕರು ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗದ ಸಹಾಯಕ ನಿರ್ದೇಶಕರಾದ ನಾಗೇಶ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



