ಅರಸೀಕೆರೆ: ರಕ್ತ ಪರೀಕ್ಷೆ ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗ, ಪ್ರತಿಯೊಬ್ಬ ವ್ಯಕ್ತಿಯ ರಕ್ತ ಪರೀಕ್ಷೆಯ ಮೂಲಕ ಅವರ ದೇಹದ ಸ್ಥಿತಿ ಗತಿ ತಿಳಿಯಬಹುದು. ಕಾಯಿಲೆ ಉಲ್ಬಣ ಆಗುವ ಮುನ್ನ ರೋಗ ಪತ್ತೆ ಹಚ್ಚಿದರೆ ಗುಣಪಡಿಸಲು ಸುಲಭ.
ಅಂತೆಯೇ ಮೆಡಾಲ್ ಮೈಸೂರು ಸಹಯೋಗದಲ್ಲಿ ದೀಪಾಲಿಧಾಮ ಶಟಲ್ ಟೀಂ ಅರಸೀಕೆರೆ ನಾಗರಿಕರಿಗೆ ದೀಪಾಲಿಧಾಮ ದಲ್ಲಿ ಹಮ್ಮಿಕೊಂಡಿದ್ದ ರಕ್ತ ಪರೀಕ್ಷಾ ಶಿಬಿರ ಅತ್ಯಂತ ಯಶಸ್ವಿ ಆಗಿದೆ.ಶಿಬಿರದಲ್ಲಿ ಹಾಸನದ ಇಂಡಿಯಾನ ಆಸ್ಪತ್ರೆ ವತಿಯಿಂದ ಇ ಸಿ ಜಿ ಹಾಗೂ ಬಸವೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪರೀಕ್ಷೆ ಮಾಡಿಸಿದ್ದು ನಗರದ ನಗರದ ನಾಗರಿಕರ ಅರೋಗ್ಯ ಕಾಳಜಿಗೆ ಹಿಡಿದ ಕೈಗನ್ನಡಿ ..ಸಾಕಷ್ಟು ಜನ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಟಲ್ ಟೀಂ ಮುಖ್ಯಸ್ಥ ಬಿ. ಪರಮೇಶ್ ತಿಳಿಸಿದರು.
ಮೆಡಾಲ್ ಮೈಸೂರ್ ಪ್ರಮುಖ ಹರೀಶ್ ಮಾತನಾಡಿದರು.ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ದಲ್ಲಿ ಕರವೇ ಅಧ್ಯಕ್ಷ ಹೇಮಂತ್ ಕುಮಾರ್, ಜಯಪ್ರಕಾಶ್ ಗುರೂಜಿ. ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಶೇಖರಪ್ಪ.. ಈ ಒ. ಮೋಹನ್ ಕುಮಾರ್ ಹೆಚ್. ಬಿ.ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಮಂಜುನಾಥ, ಆನಂದ್ ಕೌಶಿಕ್.ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮ ದಲ್ಲಿ ಮೆಡಾಲ್ ನ ಯೋಗೀಶ್, ಮಲ್ಲಿಕಾರ್ಜುನ ಬಸವೇಶ್ವರ ಕಣ್ಣಾಸ್ಪತ್ರೆಯ ಹರ್ಷ, ಇಂಡಿಯಾನ ಹಾಸನ ಆಸ್ಪತ್ರೆ ಯ ರಂಗಸ್ವಾಮಿ, ದೀಪಾಲಿ ಧಾಮ ಶಟಲ್ ಟೀಂ ನ ಸತೀಶ್ ಹೆಚ್. ಆರ್. ಕೃಷ್ಣಮೂರ್ತಿ, ಕೇಶವ ಮೂರ್ತಿ, ಯಲ್ಲಪ್ಪ. ಮಯೂರ್ ನಾಯಕ್.ಚಂದ್ರನಾಯಕ್, ಹರೀಶಕುಮಾರ್, ಮಧು, ಜಾನಪದ ಪರಿಷತ್ ಕಾರ್ಯದರ್ಶಿ ದಿಬ್ಬೂರ್ ಯೋಗೀಶ್ ಸಾವಿತ್ರಿ ಬಾಯಿ ಪುಲೆ ಸಂಘದ ಅಧ್ಯಕ್ಷೆ ಎಂ. ವಿ. ಕುಸುಮ ಮುಂತಾದವರು ಭಾಗವಹಿಸಿದ್ದರು.