ಬೆಂಗಳೂರು: ಬೆಂಗಳೂರಿನ ಮಾಕಳಿಯ ಬಿಎಂಎನ್ ಪಬ್ಲಿಕ್ ಸ್ಕೂಲ್ನ ಕಬಡ್ಡಿ ತಂಡವು ರಾಜ್ಯ ಮಟ್ಟದ ಸಿಬಿಎಸ್ಇ ಕಬಡ್ಡಿ ಚಾಂಪಿಯನಶಿಪ್ ಗೆಲ್ಲುವ ಮೂಲಕ ಶಾಲೆಯಲ್ಲಿ ವಿಜಯೋತ್ಸವಕ್ಕೆ
ಕಾರಣವಾಯಿತು. ಚಾಂಪಿಯನ್ಗಳು ಟ್ರೋಫಿಯೊAದಿಗೆ ಮರಳುತ್ತಿದ್ದಂತೆ ಶಾಲೆಯ ಆವರಣದಲ್ಲಿ ಹೆಮ್ಮೆ, ಸಂಭ್ರಮ ಮುಗಿಲು ಮುಟ್ಟಿತು. ಕರ್ನಾಟಕದಾದ್ಯಂತ ೫೫ ಸಿಬಿಎಸ್ಇ ಶಾಲೆಗಳ ಕಠಿಣ ಸ್ಪರ್ಧೆಯ ನಡುವೆ ಕಬಡ್ಡಿ ತಂಡವು ಟ್ರೋಫಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಘನ ವಿಜಯದೊಂದಿಗೆ ಜುಲೈ ೨೦೨೫ ಈ ಯುವ ಕ್ರೀಡಾಪಟುಗಳ ನೆನಪಿನಲ್ಲಿ ವೈಭವದ ಮಾಸವಾಗಿ ಉಳಿಯಲಿದೆ.
ಅವರ ಈ ವಿಜಯದ ಪ್ರಯಾಣ ಸುಲಭವಾಗಿರಲಿಲ್ಲ – ಬೆಂಗಳೂರಿನ ಸುಡು ಬಿಸಿಲಿನಲ್ಲಿ ಸುರಿವ ಬೆವರನ್ನೂ ಲೆಕ್ಕಿಸದ ನಿರಂತರ ಅಭ್ಯಾಸ ಮತ್ತು ಪರಿಪೂರ್ಣತೆಯನ್ನು ಸಾಧಿಸಲು ಬಳಸಿದ ತಂತ್ರಗಾರಿಕೆಯು ಈ ಗೆಲುವಿಗೆ ದಾರಿ ಮಾಡಿಕೊಟ್ಟವು. ತಂಡದ ಶಿಸ್ತು, ದೃಢ ನಿಶ್ಚಯ ಮತ್ತು ಕ್ರೀಡಾ ಮನೋಭಾವವು ಬಿಜಾಪುರದ ವಳಗಿಯ ಸಂಗನಬಸವ ಅಂತರರಾಷ್ಟಿçÃಯ ವಸತಿ ಶಾಲೆಯಲ್ಲಿ ಎಲ್ಲರ ಗಮನವನ್ನು ಸೆಳೆಯಿತು.
ಈ ಗೆಲುವಿನೊಂದಿಗೆ ಮತ್ತೊಂದು ದೊಡ್ಡ ಸವಾಲಿಗೆ ತಂಡ ಸಜ್ಜಾಗಿದೆ. ಅದೇ – `ಸಿಬಿಎಸ್ಇ ರಾಷ್ಟಿçÃಯ ಕಬಡ್ಡಿ ಚಾಂಪಿಯನಶಿಪ್ ೨೦೨೫ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಕಸೌಲಿಯ ಸುಂದರವಾದ ಬೆಟ್ಟಗಳ ನಡುವೆ ಇರುವ `ಕಸೌಲಿ ಇಂಟರ್ನಾ್ಯಷನಲ್ ಪಬ್ಲಿಕ್ ಸ್ಕೂಲ್’ನಲ್ಲಿ ೨೦೨೫ರ ಸೆಪ್ಟೆಂಬರ್ ೨೯ ರಂದು ರಾಷ್ಟçಮಟ್ಟದ ಕಬಡ್ಡಿ ಕ್ರೀಡಾಕೂಟ ನಿಗದಿಯಾಗಿದ್ದು ಕರ್ನಾಟಕದ ಈ ಪ್ರದಿನಿದಿಗಳು ಮಿಂಚಲು ಅಲ್ಲಿ ವೇದಿಕೆ ಸಿದ್ಧಗೊಂಡಿದೆ.
ಈ ವೇದಿಕೆಯಲ್ಲಿ `ಬಿಎಂಎನ್ ಪಬ್ಲಿಕ್ ಸ್ಕೂಲ್’ನ ಕಬಡ್ಡಿ ತಂಡವು ತೀವ್ರ ಪೈಪೋಟಿ ನೀಡಲು ಸಿದ್ದಗೊಂಡಿದೆ. `ಬಿಎಂಎನ್ ಪಬ್ಲಿಕ್ ಸ್ಕೂಲ್’ನ ಆಡಳಿತ ಮಂಡಳಿ, ಪ್ರಾಂಶುಪಾಲರು
ಮತ್ತು ಸಿಬ್ಬಂದಿ ಈ ವಿಚಾರದಲ್ಲಿ ಅತೀವ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅದ್ಭುತ ಸಾಧನೆಗಾಗಿ ಆಟಗಾರರನ್ನು ಅಭಿನಂದಿಸಿದ ಅವರು, ರಾಷ್ಟಿçÃಯ ಕ್ರೀಡಾಕೂಟದಲ್ಲಿ ತಂಡದ ಅಮೋಘ ಯಶಸ್ಸಿಗಾಗಿ ಹಾರೈಸಿದ್ದಾರೆ. “ಕನಸು ಕಾಣು. ಧೈರ್ಯ ಮಾಡು. ಮುನ್ನುಗ್ಗು” ಎಂಬ ಶಾಲೆಯ ಮಂತ್ರವು ಈ ಯುವ ಕಬಡ್ಡಿ ಯೋಧರಿಗೆ ಹೇಳಿಮಾಡಿಸಿದಂತಿದೆ.
ಧೈರ್ಯಶಾಲಿ ಮತ್ತು ಶಕ್ತಿಶಾಲಿ ವಿದ್ಯಾರ್ಥಿನಿಯರು ಸಿದ್ಧರಾಗಿದ್ದಾರೆ. ಬೆಂಗಳೂರಿನ ಬೀದಿಗಳಿಂದ ಹಿಮಾಚಲದ ಬೆಟ್ಟಗಳವರೆಗೆ ಅವರು ಕರ್ನಾಟಕದ ಹೆಮ್ಮೆಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. “ಹೋಗಿ ನಮ್ಮನ್ನು ಹೆಮ್ಮೆಪಡುವಂತೆ ಮಾಡಿ!”ಎಂಬ ಅಭಿಲಾಷೆ ಮನೆಗೆ ಮರಳಿದ ಎಲ್ಲರ ಭಾವನೆಗಳಲ್ಲೂ ಪ್ರತಿಧ್ವನಿಸಿತು. ಶಾಲೆಯ ಮಕ್ಕಳು ದೇಶದ ಶ್ರೇಷ್ಠ
ಆಟಗಾರರನ್ನು ಎದುರಿಸಲು ಸಿದ್ಧರಾಗಿರುವ ಈ ಸಮಯದಲ್ಲಿ ಅವರ ಮನದಲ್ಲಿ `ಉತ್ಸಾಹದಿಂದ ಪ್ರತಿನಿಧಿಸುವುದು, ಹೆಮ್ಮೆಯಿಂದ ಆಟವಾಡುವುದು ಮತ್ತು
ಹೃದಯಪೂರ್ವಕವಾಗಿ ಕಬಡ್ಡಿಯಲ್ಲಿ ತಲ್ಲೀನರಾಗುವುದು’ ಎಂಬ ಮಂತ್ರವು ಸ್ಪಷ್ಟವಾಗಿದೆ. ಇಡೀ ತಂಡದ ಸದಸ್ಯರಿಗೆ ಮತ್ತು ತರಬೇತುದಾರರನ್ನು ಬಿಎಮ್ಎನ್ ಪಬ್ಲಿಕ್
ಸ್ಕೂಲ್ ಪ್ರಾಂಶುಪಾಲರಾದ ಡಾ.ವನಿತಾ ಲೋಕೇಶ್ ಮತ್ತು ಸಿಬ್ಬಂದಿವರ್ಗ, ಶಾಲಾ ಆಡಳಿತ ಮಂಡಳಿಯು ಶುಭಕೋರಿದೆ.