ಬೆಂಗಳೂರು: ವಿಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಬಿಎಂಟಿಸಿ ಬಸ್ ಪಲ್ಸರ್ ಮೋಟರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿದ್ದಾನೆ.
ಸಂಕೇತ್ ದತ್ತಾತ್ರೇಯ ಸೂರ್ಯ ವಂಶಿ(21) ಎಂಬಾತನೇ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಬೈಕ್ ಚಾಲಕ ರಾಹುಲ್ಗೂ ಸಹ ತೀವ್ರವಾದ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಮಾಗಡಿ ರಸ್ತೆಯ ಕೆಎಚ್ಬಿ ಬಳಿ ನಿನ್ನೆ ರಾತ್ರಿ ನಡೆದಿರುತ್ತದೆ. ಬಿಎಂಟಿಸಿ ಚಾಲಕ ಪರಾರಿಯಾಗಿರುತ್ತಾರೆ.