ಹೊಸಕೋಟೆ: ಸನಾತನ ಧರ್ಮವು ವಿಶ್ವದ ಇತರೆ ಎಲ್ಲಾ ಧರ್ಮಗಳಿಗೂ ಆಧಾರವಾಗಿದ್ದು ಸರ್ವಕಾಲಕ್ಕೂ ಅನ್ವಯಿಸುವಂತದಾಗಿದ್ದು ಎಂದೆಂದಿಗೂ ಪ್ರಸ್ತುತವಾಗಿ ಅಂತ್ಯ ಎಂಬುದಿಲ್ಲ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ತಿಳಿಸಿದರು.
ಅವರು ತಾಲೂಕಿನ ಮುಗಬಾಳ ಶ್ರೀ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಬಿ.ಎನ್. ಬಚ್ಚೇಗೌಡರಿಗೆ ಕನಕ ತುಲಾಬಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯ ಹಾಗೂ
ಕೆರೆಯಂಗಳದಲ್ಲಿರುವ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ಅತಿ ಪುರಾತನ ಕಾಲದದೇವಾಲಯಗಳಾಗಿವೆ, ಪ್ರತಿಯೊಬ್ಬ ಮನುಷ್ಯ
ನಲ್ಲಿ ಧರ್ಮ ಶ್ರದ್ಧೆ ಅತಿ ಮುಖ್ಯವಾಗಿದೆ.
ಸನಾತನಧರ್ಮದಿಂದ ಇಂದಿಗೂ ಭಾರತ ಉಳಿದು ಕೊಂಡು ಬಂದಿದೆ, ಆದರೆ ಮದ್ಯಕಾಲಿನದಲ್ಲಿ ಹಲವಾರು ಧರ್ಮಗಳ ಹುಟ್ಟಿದ್ದು ಸನಾತನ ಧರ್ಮಕ್ಕೆ ಹುಟ್ಟು ಸಾವು ಎರಡೂ ಇಲ್ಲ, ದೇಶದಪ್ರತಿಯೊಬ್ಬರ ರಕ್ತದಲ್ಲಿ ಸನಾತನ ಧರ್ಮ ಹಾಗೂ ಭಕ್ತಿ ಎಂಬ ಅಂಶ ಒಳಗೊಂಡಿದ್ದು ನಮ್ಮ ಸಂಸ್ಕೃತಿ, ಆಚರಣೆ ಹಾಗೂ ದೈವಭಕ್ತಿ ಪ್ರತಿಯೊಂದು ಮನೆ ಮನಗಳಲ್ಲಿ ತುಂಬಿದೆ.
ದೇವಾಲಯಗಳು ಗ್ರಾಮಗಳಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು, ಶಾಂತಿ, ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ. ರಾಜ್ಯದ ಧರ್ಮಸ್ಥಳ ಒಳಗೊಂಡಂತೆ ಒಂಭತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಕೆಲವೆಡೆ ತುಲಾಭಾರದ ಸೇವೆ ಮಾಡಿಸಲಾಗಿದೆ. ತಾಲೂಕಿನ ಸಾರ್ವಜನಿಕ ಜೀವನದಲ್ಲಿ ಪ್ರಥಮ ಬಾರಿಗೆ ಅಭಿಮಾನಿಗಳು ಕನಕ ತುಲಾಭಾರ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ರಾಜ್ಯದಲ್ಲಿ 37 ಸಾವಿರ ಸಿ ದರ್ಜೆ ವರ್ಗೀಕರಣದ ದೇವಾಲಯಗಳಿದ್ದು ಅಲ್ಲಿಯ ಆರ್ಚಕರಿಗೆ ತಸ್ತಿಕ್ ಹಣ ಹೆಚ್ಚು ಮಾಡುವ ಬೇಡಿಕೆಯನ್ನು ಈಡೇರಿಸಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಇದರಿಂದ ಅರ್ಚಕ ವೃತ್ತಿಯನ್ನೆ ಅವಲಂಬಿಸಿರುವವರಿಗೆ ಸಹಾಯವಾಗಲಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಡಾ: ಸಿ. ಸೋಮಶೇಖರ್ ಮಾತನಾಡಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ರಾಜಕೀಯ ಮುತ್ಸದ್ದಿ ರಾಜಕಾರಣಿ ಬಿ.ಎನ್, ಬಚ್ಚೇಗೌಡರು ಯಾವುದೇ ಹಸ್ತಕ್ಷೇಪವಿಲ್ಲದೆ ಅಧಿಕಾರ ಮಾಡಲು ಅನುವು ಮಾಡಿಕೊಟ್ಟಿದ್ದರು, ಅವರ 40 ವರ್ಷಗಳ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಸ್ವಚ್ಚ ರಾಜಕಾರಣಿ ಎಂಬ ಬಿರುದನ್ನು ಪಡೆದು ಅಭಿನಾನಿಗಳು ತುಲಾಬಾರ ಮಾಡಿರುವುದು ಅವರ ಬಗ್ಗೆ ಇರುವ ಗೌರವಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಬೇಗೂರು ಜಗದೀಶ್, ಬೆಂಡಿಗಾನಹಳ್ಳಿಯಗುತ್ತಿಗೆದಾರ ದೇವರಾಜ್ ತುಲಾಭಾರ ನಡೆಸಿಕೊಟ್ಟರು, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಮುನಿಯಪ್ಪ, ಗ್ರಾಮದ ಮುಖಂಡ ರಾಜಾರಾವ್, ಆರ್ಚಕರಾದ ಮಂಜುನಾಥ್ ಶಾಸ್ತ್ರಿ, ನಟರಾಜ್ಶಾಸ್ತ್ರಿ, ದೇವಾಲಯ ಸಮಿತಿಯ ಸದಸ್ಯರಾದ ಮಂಜುನಾಥ ಶ್ರಾಫ್, ವೀರಸ್ವಾಮಿಗೌಡ, ಜೆ.ವಿ.ಜ್ಞಾನಮೂರ್ತಿ. ಎಂ.ಎಸ್.ಕೃಷ್ಣಮೂರ್ತಿ ಹಾಗೂ ಭಕ್ತಾಧಿಗಳು ಹಾಜರಿದ್ದರು.