ಇಂದಿರಾನಗರ:ಆಚಾರ್ಯ ಶ್ರೀ ರಾಕುಂ ಅಂಧರ ಶಾಲೆಯಲ್ಲಿ ಮಾಜಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ.ಎನ್.ಎಸ್.ರೆಡ್ಡಿರವರ IPS ರವರ ಹುಟ್ಟುಹಬ್ಬದ ಸಂಭ್ರಮಾಚರಣೆ. ಸಂಸ್ಥಾಪಕರಾದ ಆಚಾರ್ಯ ಶ್ರೀರಾಕುಂ ಗುರೂಜೀರವರು, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ನಿವೃತ್ತ ಐ.ಪಿ.ಎಸ್.ಅಧಿಕಾರಿ ಬಿ.ಎನ್.ಎಸ್.ರೆಡ್ಡಿರವರು, ಡಾ||ಕವಿತಾ ರೆಡ್ಡಿ ಮತ್ತು ಇಂಟಕ್ ರಾಜ್ಯಾಧ್ಯಕ್ಷರಾದ ಲಕ್ಷ್ಮಿವೆಂಕಟೇಶ್ ರವರು ಅಂಧ ಮಕ್ಕಳ ಜೊತೆಯಲ್ಲಿ ಹುಟ್ಟುಹಬ್ಬದ ಅಚರಣೆ ಮಾಡಿದರು.
ಆಚಾರ್ಯ ಶ್ರೀ ರಾಕುಂ ಗುರೂಜೀರವರು ಮಾತನಾಡಿ ಸಮಾಜದ ಬದಲಾವಣೆ ಮತ್ತು ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಬಿ.ಎನ್.ಎಸ್..ರೆಡ್ಡಿರವರು ಪೊಲೀಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ನಂತರ ಬಿ.ಎನ್.ಎಸ್.ರೆಡ್ಡಿರವರು ಸಮಾಜ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಪರಿಸರ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬಿ.ಎನ್.ಎಸ್.ರೆಡ್ಡಿರವರು ಮಾತನಾಡಿ ಐ.ಪಿ.ಎಸ್.ಪೊಲೀಸ್ ಅಧಿಕಾರಿಯಾಗಿ ರಾಜ್ಯ ಸೇವೆ ಸಲ್ಲಿಸಿರುವುದು ನನಗೆ ತೃಪ್ತಿ ತಂದಿದೆ.
ಮನುಷ್ಯರು ನಾನು, ನನ್ನದು ಎಂಬ ಅಹಂಕಾರ ಬೀಡಬೇಕು, ನಾವೆಲ್ಲರು ಎಂಬ ವಿಶಾಲ ಮನೋಭಾವನೆಯಲ್ಲಿ ಬದುಕಬೇಕು. ಸಮಾಜದಲ್ಲಿ ಇಂದು ನೆಮ್ಮದ್ದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಕಾರಣ ಮನುಷ್ಯನ ದುರಾಸೆಗೆ ಕಾರಣ.
ಉತ್ತಮ ಸಮಾಜ ನಿರ್ಮಾಣವಾಗಬೇಕು ಸಹೋದರತ್ವದಲ್ಲಿ ಎಲ್ಲರು ಬದುಕು ಸಾಗಿಸಬೇಕು. ವಿಶ್ವ ಲಾನ್ ಟೆನ್ನಿಸ್ ಕ್ರೀಡೆಯಲ್ಲಿ 7 ಬಾರಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದೇನೆ ಎಂದು ಹೇಳಿದರು.