ದೇವನಹಳ್ಳಿ: ಪಟ್ಟಣದ ೨೩ ನೇ ವಾರ್ಡಿನ ಹಕ್ಕುಪೇಟೆ ನಿವಾಸಿ ವೆಂಕಟೇಶ್ (೫೦) ಎಂಬಾತನ ಶವ ಕೋಟೆ ಬಳಿಯ ಚಿಕ್ಕಕೆರೆಯಲ್ಲಿ ಪತ್ತಯಾಗಿದೆ. ಮೃತ ವೆಂಕಟೇಶ್ ಎಂದಿನAತೆ ಸಂಜೆಯ ಒಳಗೆ ಮನೆಗೆ ವಾಪಾಸ್ಸಾಗಿತ್ತಿದ್ದು ಗುರುವಾರ ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿ ನಂತರ ಶುಕ್ರವಾರ ಬೆಳಿಗ್ಗೆ ಕೆರೆಯ ಪಕ್ಕದಲ್ಲಿ ಆತನ ಟಿವಿಎಸ್ ಮೊಪೆಡ್ ಮತ್ತು ಒಂದು ಚಪ್ಪಲಿ ಇರುವುದನ್ನು ಕಂಡು ಪೋಲಿಸರಿಗೆ ದೂರು ನೀಡಿದ್ದಾರೆ ದೇವನಹಳ್ಳಿ ಪೋಲಿಸ್ ಇನ್ಸ್ಪೆಕ್ಟರ್ ರಾಕೇಶ್ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಸಹಕಾರದೊಂದಿಗೆ ಕೆರೆಯಲ್ಲಿ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಸಾವಿನ ಕಾರಣದ ಸತ್ಯಾಸತ್ಯತೆಯ ತನಿಖೆ ಮುಂದುವರಿಸಿದ್ದಾರೆ.



