ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸರ್ಕಾರದ ಮಹತ್ವಪೂರ್ಣ ಯೋಜನೆ ಭಾರತ್ ರೈಸ್ ವಿತರಿಸುವ ಕಾರ್ಯಕ್ರಮ.ನಿಕಟಪೂರ್ವ ಬಿಬಿಎಂಪಿ ಸದಸ್ಯರು, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ.ಉಮೇಶ್ ಶೆಟ್ಟಿರವರು ಭಾರತ್ ರೈಸ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಬಡವರು ಮತ್ತು ಮಧ್ಯಮವರ್ಗದವರು ಹಸಿವಿನಿಂದ ಬಳಲಬಾರದು ಎಂದು ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ.ಅಕ್ಕಿ ಉಚಿತ ಮತ್ತು ಇನ್ನಿತರೆ ಜನರಿಗೆ ಅನುಕೂಲವಾಗಲಿ ಎಂದು 1 ಕೆ.ಜಿ.ಅಕ್ಕಿಗೆ 29ರೂಪಾಯಿ ನಿಗದಿ ಮಾಡಿ ಕೇಂದ್ರ ಸರ್ಕಾರ ವಿತರಿಸುತ್ತಿದೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಪ್ರಧಾನಿ ನರೇಂದ್ರ ಮೋದಿರವರ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿ ತರಲು ಪಿ.ಎಂ.ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ ಮುದ್ರ ಯೋಜನೆ ಮತ್ತು ಜನಜೀವನ್ ಮೀಷನ್ 40ಕೋಟಿ ಮನೆಗಳಿಗೆ ನೀರಿನ ಸಂಪರ್ಕ, ಬೀದಿ ವ್ಯಾಪಾರಿಗಳಿಗೆ ಸ್ವ ನಿಧಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ, ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ಕೊಟ್ಯಂತರ ಮನೆಗಳ ನಿರ್ಮಾಣ ಮಾಡಿಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಿ ಜನರ ಆರೋಗ್ಯ ಸುರಕ್ಷತೆ ಗಮನಹರಿಸಲಾಗಿದೆ. 500ವರ್ಷಗಳ ಸತತ ಹೋರಾಟದ ಫಲ ಪ್ರಧಾನಿ ನರೇಂದ್ರಮೋದಿರವರ ಸಾರಥ್ಯದಲ್ಲಿ ಅಯೋಧ್ಯೆ ಭವ್ಯ ಶ್ರೀರಾಮಮಂದಿರ ಲೋಕಾರ್ಪಣೆ. ಕೊರೋನ ಸಂದರ್ಭದಲ್ಲಿ ಇಡಿ ವಿಶ್ವವೆ ತಲ್ಲಣಗೊಂಡಿತ್ತು ಅದರೆ ಪ್ರಧಾನಿ ನರೇಂದ್ರಮೋದಿರವರ ದಿಟ್ಟತನದಿಂದ ದೇಶದ ಜನರಿಗೆ ಉಚಿತವಾಗಿ ವಾಕ್ಸಿನ್ ಮತ್ತು 80ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಿಸಿದರು.
ಇಂತಹ ಸಂದರ್ಭದಲ್ಲಿ ದೇಶವನ್ನು ಮುನ್ನೇಡೆಸಿ ಆರ್ಥಿಕವಾಗಿ ಸಬಲರಾಗಿ ವಿಶ್ವದಲ್ಲಿ ನಾಲ್ಕನೇಯ ಸ್ಥಾನದಲ್ಲಿ ಚೇತರಿಕೆ ಕಂಡಿದೆ.
ವಿಶ್ವದ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಮತ್ತೋಮ್ಮೆ ಮೋದಿ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬರಲಿದೆ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿಸೂರ್ಯರವರು ಎರಡನೇಯ ಬಾರಿಗೆ ಸಂಸದರಾಗಿ ಆಯ್ಕೆಯಾಗುವುದು ಖಚಿತ ಎಂದು ಹೇಳಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಮಪ್ಪ, ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಡೊಡ್ಡಯ್ಯ, ಬಿಜೆಪಿ ಮುಖಂಡರುಗಳಾದ ನಂಜಪ್ಪ, ಶಾಮಣ್ಣ, ಮಂಜು, ಜಯದೇವ್, ಚಲುವಚಾರ್ ರವರು ಭಾಗವಹಿಸಿದ್ದರು.