ಬೆಂಗಳೂರು: ಬಂಟರ ಸಂಘದ ಸಭಾಂಗಣದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಧೈಯ ವಾಕ್ಯದೊಡನೆ ಬೆಂಗಳೂಲಿನಲ್ಲಿ ನವೆಂಬರ್ 24, 25 ಮತ್ತು 26 ರಂದು ಆಯೋಜಿಸಿಲಾಗಿದೆ.
ಇತಿಹಾಸ ಸೃಷ್ಟಿಸರುವ ಬೆಂಗಳೂರು ಕಂಬಳ’ ಕಾರ್ಯಕ್ರಮದಲ್ಲಿ ಕರಾವಳಿ ಜಿಲ್ಲೆಯ ಪ್ರತಿಯೊಬ್ಬರೂ ಭಾಗವಹಿಸುವುದರ ಜೊತೆಗೆ ನಮ್ಮದೇ ಹಬ್ಬವನ್ನಾಗಿ ಆಚರಿಸಬೇಕಾಗಿದೆ.ಬೆಂಗಳೂರುನಲ್ಲಿ ನೆಲೆಸಿರುವ ನಮ್ಮೆಲ್ಲಾ ಬಂಧುಗಳು, ಸಂಘಟನೆಗಳು, ಜಾತೀಯ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಈ ಮಹಾ ಉತ್ಸವದಲ್ಲಿ ಪಾಲ್ಗೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಕೂಡ.
ಈ ನಿಟ್ಟನಲ್ಲಿ ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸಲು, ಆಯೋಜಕರು ಬೆಂಗಳೂಲಿನಲ್ಲಿ ನೆಲೆಸಿರುವ ಸರ್ವ ಜಾತೀಯ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ, ಎಲ್ಲ ಅತ್ಯಮೂಲ್ಯ ಸಲಹೆಗಳನ್ನು ಪಡೆಯಲು ತೀರ್ಮಾನಿಸಿಲಾಯಿತು.ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ಈ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಅಶೋಕ ರೈ ರವರು, ಕಾರ್ಯಾಧ್ಯಕ್ಷರಾದ ಗುರುಕಿರಣ್ ರವರು, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿಯವರು ಮತ್ತು ಸಂಘಟನಾಧ್ಯಕ್ಷರಾದ ಉಮೇಶ್ ಶೆಟ್ಟಿಯವರು ಮತ್ತು ಉಪೇಂದ್ರ ಶೆಟ್ಟಿಯವರು ಹಾಗೂ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಅರಮನೆ ಮೈದಾನದಲ್ಲಿ ನವಂಬರ್ 24, 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಈಗಾಗಲೇ 150 ಅಧಿಕ ಕೋಣಗಳ ನೋಂದಣಿಯಾಗಿದ್ದು, ನ.23ರಂದು ಕೋಣಗಳಿಗೆ ಉಪ್ಪಿ ನಂಗಡಿಯಲ್ಲಿ ಬೀಳ್ಕೊಡುಗೆ ನಡೆಯಲಿದೆ. ಬಳಿಕ ಬೆಂಗಳೂರಿಗೆ ಬರಲಿವೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆ ಗಳೊಂದಿಗೆ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ಉಪ್ಪಿನಂಗಡಿಯಿಂದ ಹೊರಡುವ ಎಲ್ಲ ಕೋಣಗಳಿಗೆ ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತ ನೀಡಲಾಗುವುದು, ಅಲ್ಲದೇ ಪ್ರತಿ ತಾಲ್ಲೂಕಿನಲ್ಲಿ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದು ಹೇಳಿದರು.
ಬೆಂಗಳೂರು ಕಂಬಳಕ್ಕೆ 10ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರಾವಳಿಯ ಸಮಸ್ತ ಸಮುದಾಯದವರು ಒಟ್ಟಾಗಲಿದ್ದಾರೆ. 50 ಅಧಿಕ ಸಂಘಟನೆಗಳು ಕಂಬಳಕ್ಕೆ ಸಹಕಾರ ನೀಡುತ್ತಿವೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ವಿವರಿಸಿದರು.
ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ಕಂಬಳ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಕಾರ್ಯಾಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.ಮಾನ್ಯ ಮುಖ್ಯಮಂತ್ರಿಗಳಾದ ಉಪಮುಖ್ಯಮಂತ್ರಿಗಳು, ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು,ಡಿ.ವಿ.ಸದಾನಂದಗೌಡರು, ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಶಿಲ್ಪಶೆಟ್ಟಿ, ಕನ್ನಡ ಚಿತ್ರರಂಗದ ಹಾಟ್ರಿಕ್ ಹಿರೋ ಶಿವರಾಜ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಸೇರಿದಂತೆ ವಿವಿಧ ಚಿತ್ರರಂಗ ಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಭಾಗವಹಿಸಲಿದ್ದಾರೆ ಹಾಗೂ 24ನೇ ತಾರೀಖು ತುಳು ಕೂಟ ರಚನೆಯಾಗಿ 50ವರ್ಷದ ತುಂಬಿದ ವರ್ಷಾಚರಣೆ ಸಂಭ್ರಮ ಎಂದು ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ತಿಳಿಸಿದರು.
‘ಬೆಂಗಳೂರು ಕಂಬಳ. ನಮ್ಮ ಕಂಬಳ’ ಎಂಬ ಥೀಮ್ ಸಾಂಗ್ ಬಿಡುಗಡ ಮಾಡಲಾಯಿತು. ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್ನಲ್ಲಿ ಥೀಮ್ ಸಾಂಗ್ ಮೂಡಿ ಬಂದಿದೆ.
ಕಂಬಳ ಶೀರ್ಷಿಕೆ ಪ್ರಾಯೋಜಕರಾದ ಆಭರಣ ಜುವೆಲ್ಲರ್ಸ್ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.