This is the title of the web page
This is the title of the web page

ಕಬ್ಜ’ ಟ್ರೇಲರ್‍ಗೆ ಅಜಯ್ ದೇವಗನ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚುಗೆ

ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದ ಟ್ರೇಲರ್ ಶನಿವಾರವಷ್ಟೇ, ಅಮಿತಾಭ್ ಬಚ್ಚನ್ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಾಲಿವುಡ್ ನಟ-ನಟಿಯರು ಮತ್ತು ತಂತ್ರಜ್ನರಾದ ಅಜಯ್ ದೇವಗನ್, ರಾಕೇಶ್ ರೋಶನ್, ಮನೋಜ್ ಬಾಜಪೇಯಿ, ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

‘ಕಬ್ಜಾ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶಿವರಾಜ್ಕುಮಾರ್, ಶ್ರೀಯಾ ಶರಣ್, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ನಿರ್ಮಿಸುತ್ತಿದ್ದು, ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು ನಿರ್ಮಾಣದಲ್ಲಿ ಕೈ ಜೋಡಿಸಿವೆ. ಚಿತ್ರವು ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.