ದಕ್ಷಿಣ ಭಾರತದ ಸಿನಿಮಾ ಮಂದಿ ಪ್ಯಾನ್ ಇಂಡಿಯಾ ರುಚಿ ಕಂಡುಕೊಂಡಿದ್ದಾರೆ. ಸೂಪರ್ಸ್ಟಾರ್ಗಳನ್ನಿಟ್ಟುಕೊಂಡು ಪ್ಯಾನ್ ಇಂಡಿಯಾ ಸಬ್ಜೆಕ್ಟ್ಗಳಿಗೆ ಕೈ ಹಾಕಿದರೆ ಹಣ ಮಾಡಬಹುದು ಅನ್ನೋದು ಗೊತ್ತಾಗಿ ಹೋಗಿದೆ. ‘ಬಾಹುಬಲಿ’, ‘RRR, ‘ಕೆಜಿಎಫ್ 2’ ‘ಕಾಂತಾರ’ದಂತಹ ಸಿನಿಮಾಗಳು ಉದಾಹರಣೆಯಾಗಿ ಸಿನಿಮಾ ಮಂದಿ ಮುಂದೆ ನಿಂತಿವೆ. ಹೀಗಾಗಿ ವರ್ಷಕ್ಕೆ ಎರಡು ಸಿನಿಮಾ ಮಾಡುವ ಬದಲು, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದ್ಬಿಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಪಕರಿಗೆ ಒಂದೊಳ್ಳೆ ಲಾಭವನ್ನು ತಂದುಕೊಟ್ಟಿದೆ.
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ಸಿನಿಮಾ ಈಗಾಗಲೇ ವ್ಯವಹಾರ ಕುದುರಿಸುವುದಕ್ಕೆ ಮುಂದಾಗಿದೆ. ಬಾಲಿವುಡ್ನ ದಿಗ್ಗಜರು ‘ಪುಷ್ಪ 2’ ಸಿನಿಮಾವನ್ನು ಕೊಂಡುಕೊಳ್ಳುವುದಕ್ಕೆ ಮುಗಿಬಿದ್ದಿದ್ದಾರೆ. ಈಗಾಗಲೇ ಒಂದರ ಹಿಂದೊಂದು ಹಕ್ಕುಗಳು ಮಾರಾಟ ಆಗುತ್ತಿವೆ. ಕೆಲವು ಮಾತುಕತೆ ಹಂತದಲ್ಲಿ ಇವೆ. ‘ಪುಷ್ಪ 2’ ಸಿನಿಮಾ ಬ್ಯುಸಿನೆಸ್ ಹೇಗಾಗುತ್ತಿದೆ? ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಥಿಯೇಟ್ರಿಕಲ್ ರೈಟ್ಸ್ (ವಿತರಣೆ ಹಕ್ಕು), ಡಿಜಿಟಲ್ ರೈಟ್ಸ್, ಡಬ್ಬಿಂಗ್ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರ್ಮಾಪಕರು ವ್ಯಾಪಾರ ಕುದುರಿಸುವುದಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಕೆಲವು ಬ್ಯುಸಿನೆಸ್ಗಳನ್ನು ‘ಪುಷ್ಪ 2’ ತಂಡ ಕ್ಲೋಸ್ ಮಾಡಿದೆ. ‘ಪುಷ್ಪ 2’ ಸಿನಿಮಾ ಹಿಂದಿ ಬೆಲ್ಟ್ಗಳ ವಿತರಣೆ ಹಕ್ಕನ್ನು ಅನಿಲ್ ತಡಾನಿ ಕೊಂಡುಕೊಂಡಿದ್ದಾರೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿದೆ. ನೆಟ್ಫ್ಲಿಕ್ಸ್ಗೆ 275 ಕೋಟಿ ರೂಪಾಯಿಗೆ ಓಟಿಟಿ ಹಕ್ಕುಗಳು ಸೇಲ್ ಆಗಿವೆ ಅನ್ನೋ ಮಾಹಿತಿ ಬಂದಿದೆ. ಇನ್ನೊಂದು ಕಡೆ ಎಲ್ಲಾ ಭಾಷೆಯ ಸ್ಯಾಟಲೈಟ್ ಹಕ್ಕುಗಳು ಕೂಡ ಸೇಲ್ ಆಗಿದೆ ಅನ್ನೋ ಸುದ್ದಿ ಈಗ ಓಡಾಡುತ್ತಿದೆ.
2ನೇ ಸಿನಿಮಾ ಗೆದ್ದಾಗ ಏನಂದಿದ್ರು? ಸ್ಯಾಟಲೈಟ್ಸ್ ಹಕ್ಕುಗಳನ್ನು ಖರೀದಿ ಮಾಡುವ ಹಿಂದಿ ಚಿತ್ರರಂಗದ ದಿಗ್ಗಜ ಜಯಂತಿ ಲಾಲ್ ‘ಪುಷ್ಪ 2’ ಸಿನಿಮಾ ಎಲ್ಲಾ ಭಾಷೆಯ ಸ್ಯಾಟಲೈಟ್ ಹಕ್ಕುಗಳನ್ನು ಈಗಾಗಲೇ ಖರೀದಿ ಮಾಡಿದ್ದಾರೆ ಅನ್ನೋ ಓಡಾಡುತ್ತಿದೆ. ದೊಡ್ಡ ಮೊತ್ತವನ್ನು ಕೊಟ್ಟು ಅಲ್ಲುಅರ್ಜುನ್ ಹಾಗೂ ಸುಕುಮಾರ್ ಸಿನಿಮಾವನ್ನು ಖರೀದಿ ಮಾಡಿದ್ದಾರೆನ್ನಲಾಗಿದೆ. ಚಿತ್ರರಂಗದ ಮೂಲಗಳ ಪ್ರಕಾರ, ‘ಪುಷ್ಪ 2’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು 80 ಕೋಟಿ ರೂಪಾಯಿಗೆ ಮಾರಾಟ ಆಗಿರಬಹುದು ಎಂದು ವರದಿ ಮಾಡಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಟ್ನಲ್ಲಿ ಬಿಡುಗಡೆಗೆ ಇನ್ನೂಸಮಯವಿರುವಾಗಲೇ 600 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ. ಇನ್ನೂ ಥಿಯೇಟ್ರಿಕಲ್ ರೈಟ್ಸ್ ಮಾರಾಟ ಆಗುವುದು ಬಾಕಿಯಿದ್ದು, 1000 ಕೋಟಿ ರೂಪಾಯಿಗೂ ಅಧಿಕ ಬ್ಯುಸಿನೆಸ್ ಆಗಬಹುದು ಎಂದು ಅಂದಾಜಿಸಲಾಗಿದೆ.