ಬೆಂಗಳೂರು: ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವು ಎರಡು ದಿನಗಳ ಪುಸ್ತಕ ಪ್ರದರ್ಶನವನ್ನು ಆಯೋಜಿಸಿದೆ. ಈ ಪ್ರದರ್ಶನವು ಎರಡೂ ದಿನಗಳಲ್ಲಿ ಬೆಳಿಗ್ಗೆ ೯:೦೦ರಿಂದ ಸಂಜೆ ೭:೦೦ರವರೆಗೆ ತೆರೆದಿರುತ್ತದೆ. ಇದು ಕೇವಲ ಎಸ್ಜೆಯು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಮಾತ್ರವಲ್ಲದೆ, ಸಾರ್ವಜನಿಕರಿಗೆ ಹಾಗೂ ಸೆಂಟ್ ಜೋಸೆಫ್ನಡಿ ಇರುವ ಇತರ ಸಂಸ್ಥೆಗಳಾದ ಸೆಂಟ್ ಜೋಸೆಫ್ ಕಾನೂನು ಕಾಲೇಜು, ಸೆಂಟ್ ಜೋಸೆಫ್ ವಾಣಿಜ್ಯ ಕಾಲೇಜು (ಸ್ವಾಯತ್ತ) ಮತ್ತು ಸೆಂಟ್ ಜೋಸೆಫ್ ನಿರ್ವಹಣಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೂ ತೆರೆಯಲಾಗಿದೆ.
ಈ ಪ್ರದರ್ಶನದಲ್ಲಿ ಎರಡು ಪ್ರಕಾಶಕರು ಸೇರಿದಂತೆ ಒಟ್ಟು ಎಂಟು ಪುಸ್ತಕ ಪೂರೈಕೆದಾರರು ಭಾಗವಹಿಸಿದ್ದಾರೆ. ಈ ಮಾರಾಟಗಾರರು ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳಿಗೆ ಸಂಬAಧಿಸಿದ ಪುಸ್ತಕಗಳು, ಉಲ್ಲೇಖ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು ಹಾಗೂ ಸಾಮಾನ್ಯ ಓದುಗರಿಗೆ ಹೊಂದುವ ಪುಸ್ತಕಗಳ ವಿಶಾಲ ಸಂಗ್ರಹವನ್ನು ಪ್ರದರ್ಶಿಸಿದ್ದಾರೆ.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೇ ಅದರ ಹೆಚ್ಚಿನ ರಿಯಾಯಿತಿ ದರಗಳು. ಅಂತರರಾಷ್ಟಿçÃಯ ಪುಸ್ತಕಗಳಿಗೆ ೩೦% ಕ್ಕಿಂತ ಹೆಚ್ಚಿನ ರಿಯಾಯಿತಿ, ಭಾರತೀಯ ಪ್ರಕಟಣೆಗಳಿಗೆ ೨೫% ರಿಯಾಯಿತಿ ಹಾಗೂ ಸಾಮಾನ್ಯ ಪುಸ್ತಕಗಳಿಗೆ ೨೦% ಕ್ಕಿಂತ ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಪಾಲಕರೂ ಹಾಗೂ ಸಹ ಪ್ರಾಧ್ಯಾಪಕರೂ ಆಗಿರುವ ಡಾ. ಕೆ. ಎಸ್. ಅಲಿ ಅವರ ಪ್ರಕಾರ, ಎಲ್ಲಾ ವಿಭಾಗಗಳಿಗೆ ಅನುಕೂಲವಾಗುವಂತೆ ವಿಭಿನ್ನ ಪುಸ್ತಕ ಸಂಗ್ರಹ ಹೊಂದಿರುವ ಸುಸಜ್ಜಿತ ಗ್ರಂಥಾಲಯ ಮತ್ತು ಎಸ್ಜೆಯುವಿನ ಹೆಚ್ಚಿನ ಖರೀದಿ ಸಾಮರ್ಥ್ಯದಿಂದಾಗಿ ಇಂತಹ ರಿಯಾಯಿತಿ ದರಗಳು ಸಾಧ್ಯವಾಗಿವೆ.
ಪ್ರತಿ ವಿಭಾಗಕ್ಕೂ ತಮ್ಮ ನಿಗದಿತ ಬಜೆಟ್ ಒಳಗೆ ಮುಖ್ಯ ಶೀರ್ಷಿಕೆಗಳ ಪುಸ್ತಕಗಳನ್ನು ಶಿಫಾರಸು ಮಾಡಲು ಪ್ರೋತ್ಸಾಹಿಸಲಾಗಿದೆ. ಜೊತೆಗೆ, ಪ್ರಸ್ತುತ ಗ್ರಂಥಾಲಯ ಸಂಗ್ರಹದಲ್ಲಿ ಲಭ್ಯವಿಲ್ಲದ ಅಕಾಡೆಮಿಕ್ ಪುಸ್ತಕಗಳನ್ನು ವಿದ್ಯಾರ್ಥಿಗಳು ಸೂಚಿಸುವ ಅವಕಾಶವೂ ನೀಡಲಾಗಿದೆ.
ಈ ಉಪಕ್ರಮಕ್ಕೆ ಕುಲಪತಿ, ನೋಂದಣಿ ಅಧಿಕಾರಿ, ಹಣಕಾಸು ಅಧಿಕಾರಿ ಹಾಗೂ ವಿವಿಧ ಶಾಲೆಗಳ ಡೀನ್ಗಳು ಸೇರಿದಂತೆ ವಿಶ್ವವಿದ್ಯಾಲಯದ ಆಡಳಿತದಿಂದ ಬಲವಾದ ಬೆಂಬಲ ಲಭಿಸಿದೆ.
ಎಸ್ಜೆಯುಗೆ ವಿಶ್ವವಿದ್ಯಾಲಯ ಸ್ಥಾನಮಾನ ದೊರೆತ ನಂತರ ಆಯೋಜಿಸಲಾದ ಇದು ಮೊದಲ ಪುಸ್ತಕ ಪ್ರದರ್ಶನವಾಗಿದೆ. ವಿಶೇಷವಾಗಿ ಬೆಳಗಿನ ಅವಧಿಗಳಲ್ಲಿ ಉತ್ತಮ ಜನಸಂದಣಿ ಕಂಡುಬAದಿದೆ. ಈ ಸ್ಪಂದನೆಯಿAದ ಉತ್ತೇಜಿತಗೊಂಡ ವಿಶ್ವವಿದ್ಯಾಲಯವು ಪ್ರತೀ ಸೆಮಿಸ್ಟರ್ನಲ್ಲಿ ಅಥವಾ ಕನಿಷ್ಠ ವರ್ಷಕ್ಕೆ ಒಮ್ಮೆ ಇಂತಹ ಪುಸ್ತಕ ಪ್ರದರ್ಶನಗಳನ್ನು ಆಯೋಜಿಸಿ, ಓದು ಸಂಸ್ಕöÈತಿಯನ್ನು ಬೆಳೆಸುವ ಜೊತೆಗೆ ಕ್ಯಾಂಪಸ್ನ ಶೈಕ್ಷಣಿಕ ಸಂಪನ್ಮೂಲಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ.
ಸೆಂಟ್ ಜೋಸೆಫ್ ವಿಶ್ವ ವಿದ್ಯಾಲಯದಿಂದ ಪುಸ್ತಕ ಪ್ರದರ್ಶನ



