ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಕ್ವಾರ್ಟರ್ಫೈನಲ್ ತಲುಪಿದರು. ಅಗ್ರ ಶ್ರೇಯಾಂಕದ ಬೋಪಣ್ಣ- ಎಬ್ಡೆನ್ ಜೋಡಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 7-5, 7-6 (3) ರಿಂದ ಹ್ಯೂಗೊ ನಿಸ್ ಮತ್ತು ಯಾನ್ ಝಿಲಿನ್ಸ್ಕಿ ಅವರನ್ನು ಒಂದು ಗಂಟೆ 39 ನಿಮಿಷಗಳ ಹೋರಾಟದಲ್ಲಿ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್ನಲ್ಲಿ ವಿಜೇತರಾಗಿದ್ದ ಈ ಜೋಡಿ ನಾಲ್ಕು ಏಸ್ಗಳ ಜೊತೆಗೆ ಶೇ 84 ಮೊದಲ ಸರ್ವ್ನಲ್ಲಿ ಯಶಸ್ಸು ಕಂಡಿತು.ಭಾರತ -ಆಸ್ಟ್ರೇಲಿಯನ್ ಆಟಗಾರರ ಜೋಡಿ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನ್ ಪ್ಯಾಟ್ರಿಕ್ ಸ್ಮಿತ್- ನೆದರ್ಲೆಂರ್ಡ್ಸ್ನ ಸೆಮ್ ವೆರ್ಬ್ರೀಕ್ ಜೋಡಿಯನ್ನು ಎದುರಿಸಲಿದೆ.
ಶ್ವಾಂಟೆಕ್ ನಿರ್ಗಮನ: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಮತ್ತು ಅಮೆರಿಕ ಓಪನ್ ಚಾಂಪಿಯನ್ ಕೊಕೊ ಗಾಫ್ ಅವರು ಮಹಿಳೆಯರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ನಲ್ಲಿ ಹೊರಬಿದ್ದರು. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಎಕಟೆರಿನಾ ಅವರು ಸೋಲಿಸಿದರು.