ಬೆಂಗಳೂರು: ಗಡಿವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಲ್ಲಿಂದು ಚರ್ಚೆಗೆ ಬರಲಿದೆ. ಮಹಾರಾಷ್ಟç ಸರ್ಕಾರ ಕರ್ನಾಟಕದ ಬೆಳಗಾವಿ ಸೇರಿದಂತೆ ಗಡಿಭಾಗದ ಹಲವು ಭಾಗಗಳು ನಮಗೆ ಸೇರಬೇಕೆಂದು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸುಪ್ರೀಂನಲ್ಲಿ ನಡೆಯಲಿದೆ. ೨೦೦೪ರಲ್ಲಿ ಬೆಳಗಾವಿ ತಮಗೆ ಸೇರಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಾರಾಷ್ಟç ಸರ್ಕಾರ ತಮ್ಮ ನಿಲುವು ಮನ್ನಣೆ ಮಾಡಲಿವೆ. ಇದಕ್ಕೆ ಪ್ರಬಲವಾಗಿ ವಿರೋಧಿಸಿ ಕರ್ನಾಟಕ ಸರ್ಕಾರ ತಮ್ಮ ನಿರ್ಧಾರವನ್ನು ತಿಳಿಸಲು ಸಜ್ಜಾಗಿದೆ.



