ಅಹ್ಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯ ಆರಂಭಗೊಂಡು 75 ವರ್ಷದ ಹಿನ್ನೆಲೆ ಇಂದು ಉಭಯ ದೇಶಗಳ ಪ್ರಧಾನಿಗಳು ಅಹ್ಮದಾಬಾದ್‍ನಲ್ಲಿ ಎರಡು ದೇಶಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿದರು.
ಬಾರ್ಡರ್- ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚಾಲನೆ ಸಿಕ್ಕಿತ್ತು.
ಪಂದ್ಯ ಆರಂಭಕ್ಕೂ ಮುನ್ನವೇ ಪ್ರಧಾನಿಗಳು ಮೈದಾನಕ್ಕೆ ಪ್ರವೇಶಿಸಿ ಉಭಯ ತಂಡದ ನಾಯಕರಿಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು.
ಮೋದಿ ಅವರು ನಾಯಕ ರೋಹಿತ್ ಶರ್ಮಾರಿಗೆ ಕ್ಯಾಪ್ ನೀಡಿದರೆ, ಆಸೀಸ್ ನಾಯಕ ಸ್ಟೀವನ್ ಸ್ಮಿತ್‍ರಿಗೆ ಅಲ್ಬನೀಸ್ ಅವರು ಗ್ರೀನ್ ಕ್ಯಾಪ್ ನೀಡಿದರು.
ಭಾರತದ ಪ್ರಧಾನಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಮೈದಾನದಲ್ಲಿ ವಿಶೇಷವಾಗಿ ರ್ಯಾಲಿ ನಡೆಸಿದರು. ತೆರೆದ ವಾಹನದಲ್ಲಿ ಕ್ರೀಡಾಂಗಣವನ್ನ ಸುತ್ತು ಹಾಕಿ ಕ್ರಿಕೆಟ್ ಅಭಿಮಾನಿಗಳಿಗೆ ಕೈಬೀಸಿದರು. ಸಾಲಿನಲ್ಲಿ ನಿಂತು ಆಟಗಾರರರು ರಾಷ್ಟ್ರಗೀತೆಯನ್ನು ಹಾಡುವಾಗ ಮೋದಿಯವರು ರೋಹಿತ್ ಶರ್ಮಾ ಪಕ್ಕದಲ್ಲೇ ನಿಂತು ರಾಷ್ಟ್ರಗೀತೆ ಹಾಡಿದರೆ, ಆಸೀಸ್ ಪ್ರಧಾನಿ ಆಂಟೋನಿ ಕೂಡ ತಮ್ಮ ಆಟಗಾರರ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡಿದರು.
Leave a Review