ಕನ್ನಡ ಚಿತ್ರರಂಗದ ಮತ್ತೆ ಸದ್ದು ಮಾಡ್ತಿದೆ. ತೆರೆಮೇಲೆ ಅಲ್ಲ. ಓಟಿಟಿಯಲ್ಲಿ. ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ಕನ್ನಡ ಕಂಟೆಂಡ್ ಬರೋದು ಅಪರೂಪ ಎನ್ನುವ ಆರೋಪವಿದೆ. ಆದರೆ ಕಳೆದ ಎರಡು ವಾರಗಳಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳು ಬಂದು ವೀಕ್ಷಕರನ್ನು ರಂಜಿಸುತ್ತಿವೆ. ಇತ್ತೀಚಿಗೆ ‘ಯುವ’, ‘ಬ್ಲಿಂಕ್’, ‘ಅವತಾರ ಪುರುಷ’-2, ‘ಶಾಖಾಹಾರಿ’, ‘ಜೂನಿ’ ರೀತಿಯ ಸಿನಿಮಾಗಳು ವೀಕ್ಷಕರನ್ನು ರಂಜಿಸಿವೆ.
ಅದರಲ್ಲೂ ‘ಬ್ಲಿಂಕ್’ ಹಾಗೂ ‘ಶಾಖಾಹಾರಿ’ ಚಿತ್ರಗಳ ಆರ್ಭಟ ಜೋರಾಗಿದೆ. ಇವೆಲ್ಲದರ ನಡುವೆ ಮತ್ತೆರಡು ಬಹುನಿರೀಕ್ಷಿತ ಸಿನಿಮಾಗಳು ಓಟಿಟಿಗೆ ಲಗ್ಗೆ ಇಟ್ಟಿವೆ. ಯಾವುದೇ ಅನೌನ್ಸ್ಮೆಂಟ್ ಇಲ್ಲದೇ ಸದ್ದಿಲ್ಲದೇ ಸ್ಟ್ರೀಮಿಂಗ್ ಆರಂಭಿಸಿವೆ. ಕೆಲವರು ಈಗಾಗಲೇ ಸಿನಿಮಾಗಳನ್ನು ನೋಡಿದ್ದಾರೆ.ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೊನೆಗೂ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬಂದಿದೆ.
ಕಳೆದ ವರ್ಷ ತೆರೆಕಂಡಿದ್ದ ಸಿನಿಮಾ ಬಹಳ ತಡವಾಗಿ ಸ್ಮಾಲ್ಸ್ಕ್ರೀನ್ಗೆ ಬಂದಂತಾಗಿದೆ. ಇನ್ನು ಪುನೀತ್ ರಾಜ್ಕುಮಾರ್ ಕಥೆ ಕೇಳಿ ಒಪ್ಪಿ ಮಾಡಿಸಿದ್ದ ‘ಔ2’ ಸಿನಿಮಾ ಕೂಡ ಓಟಿಟಿ ಚಂದಾದಾರರ ಮುಂದೆ ಬಂದಿದೆ. ಕಳೆದ ವರ್ಷ ನವೆಂಬರ್ 24ಕ್ಕೆ ತೆರೆಗಪ್ಪಳಿಸಿದ್ದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಇದೀಗ ಸನ್ನೆಕ್ಸ್ಟ್ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇನ್ನು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಸಿನಿಮಾ ‘O2’ ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿದೆ. ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡಿರಲಿಲ್ಲ. ಆದರೆ ಸೂರಿ ಅಭಿಮಾನಿಗಳು ಓಟಿಟಿಯಲ್ಲಿ ಚಿತ್ರಕ್ಕಾಗಿ ಕಾಯುತ್ತಿದ್ದರು. ಇನ್ನು ಆಶಿಕಾ ರಂಗನಾಥ್ ನಟನೆಯ ‘ಔ2’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ನೀವು ನೋಡಿ ಎಂದು ಸಲಹೆ ನೀಡಿದ್ದರು.