ಬ್ಯಾಂಕಾಕ್: ಭಾರತದ ಬಾಕ್ಸರ್ಗಳು ಇಲ್ಲಿ ಶುಕ್ರವಾರ ಆರಂಭವಾಗುವ ಒಲಿಂಪಿಕ್ಸ್ ಎರಡನೇ ಕ್ವಾಲಿಫೈಯರ್ ಟೂರ್ನಿಯಲ್ಲಿ ಪ್ಯಾರಿಸ್ ಟಿಕೆಟ್ ಪಡೆಯುವ ವಿಶ್ವಾಸದಿಂದ ಕಣಕ್ಕೆ ಇಳಿಯಲಿದ್ದಾರೆ.
ಈವರೆಗೆ ಭಾರತದ ನಾಲ್ಕು ಮಹಿಳಾ ಬಾಕ್ಸರ್ಗಳು ಪ್ಯಾರಿಸ್ ಟಿಕೆಟ್ ಹೊಂದಿದ್ದರು. ಆದರೆ, 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪರ್ವೀನ್ ಹೂಡಾ ಅವರು ವಾಸ್ತವ್ಯದ ಮಾಹಿತಿ ನೀಡದ ಕಾರಣ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಅವರನ್ನು 22 ತಿಂಗಳು ಅಮಾನತು ಮಾಡಿದೆ.
ಹೀಗಾಗಿ, ಅವರು ಒಲಿಂಪಿಕ್ಸ್ ಕೋಟಾ ಕಳೆದುಕೊಂಡಿದ್ದಾರೆ. ಮಾರ್ಚ್ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಟೂರ್ನಿಯಲ್ಲಿ ಭಾರತದ ಸ್ಪರ್ಧಾಳುಗಳ ಪ್ರದರ್ಶನ ನೀರಸವಾಗಿತ್ತು.