ಭಾರತದ ಮೇರಿ ಕೊಂ ಬಾಕ್ಸಿಂಗ್ ನಲ್ಲಿ ಸಾಲುಸಾಲಾಗಿ ಚಿನ್ನದ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾಗ ಭಾರತೀಯರು ಖುಷಿ ಪಡುವ ಕಾಲವೊಂದಿತ್ತು. ಇದೀಗ ಮತ್ತೆ ಬಾಕ್ಸಿಂಗ್ಸ್ ನಲ್ಲಿ ಭಾರತದ
ಮಹಿಳೆಯರು ಪದಕಗಳನ್ನುಬಾಚುತ್ತಿದ್ದಾರೆ. ಇಂಗ್ಲೆಂಡ್ನಲಿವರ್ಪೂಲ್ನಲ್ಲಿ ನಡೆದ ವಿಶ್ವಬಾಕ್ಸಿಂಗ್ ಚಾಂಪಿಯನ್ ಶಿಪ್೨೦೨೫ ರಲ್ಲಿ, ೨೪ ವರ್ಷದ ಜಾಸ್ಮಿನ್ಲಂಬೂರಿಯಾ ಚಿನ್ನದ ಪದಕ ಗೆದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿರಾಸೆ ಅನುಭವಿಸಿದ್ದ ಜಾಸ್ಮಿನ್ಗೆ ಈ ಗೆಲುವು ಹೊಸ ಉತ್ಸಾಹ ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಸೆಪ್ಟೆಂಬರ್ ೧೩ ರಂದು ನಡೆದ ೫೭ ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಪೋಲೆಂಡ್ನ ಜೂಲಿಯಾ ಸೆರೆಮೆಟಾ ಅವರನ್ನು ಸೋಲಿಸಿ ಜಾಸ್ಮಿನ್ ಅವರು ಬಂಗಾರದ ಬೇಟೆಯಾಡಿದರು. Paris Olympics ೨೦೨೫ ರ ಬೆಳ್ಳಿ ಪದಕ
ವಿಜೇತೆ ಜೂಲಿಯಾ ಅವರನ್ನು ಜಾಸ್ಮಿನ್ ಅವರು೪-೧ ಅಂತರದಿAದ ಪರಾಭವಗೊಳಿಸಿದರು.
ಕಳೆದ ವರ್ಷದ ಒಲಿಂಪಿಕ್ಸ್ನಲ್ಲಿ ಬೇಗನೆ ಹೊರಬಿದ್ದಿದ್ದ ಜಾಸ್ಮಿನ್ ಗೆ ಇದು ವೃತ್ತಿಬದುಕಿನ ಬಹು ದೊಡ್ಡ ತಿರುವಾಗಿದೆ. ಅವರು ತಮ್ಮ ತಂತ್ರಗಳನ್ನು ಸುಧಾರಿಸಿಕೊಂಡು ಇದೀಗ ವಿಶ್ವ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಅಮೆರಿಕದ ಖಿಏಔ ಟೂರ್ನಿಯಲ್ಲಿ ಭಾರತದ ನಿಶಾಂತ್ ದೇವ್ ಇತ್ತೀಚೆಗೆ ಸದ್ದು ಮಾಡಿದ್ದರು. ಈ ಭಾವನೆಯನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ, ನಾನು ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಬಹಳ ಸಂತೋಷವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಸೋಲಿನಿಂದ ಹೊರಬಂದ ನಂತರ, ನಾನು ನನ್ನ ತಂತ್ರವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಧಾರಿಸಿಕೊಂಡೆ. ಇದು ಒಂದು ವರ್ಷದನಿರಂತರ ಪರಿಶ್ರಮದ ಫಲಿತಾಂಶವಾಗಿದೆ.ಬಾಕ್ಸಿAಗ್ ಮನೆತನದಿಂದಲೇ ಬಂದಯುವತಿ ಜಾಸ್ಮಿನ್ ಲಂಬೂರಿಯ. ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಅವರಿಗೆ ಬಾಕ್ಸಿಂಗ್ ರಕ್ತಗತವಾಗಿಯೇ ಒಲಿದಿದೆ ಎಂದೇ ಹೇಳಬೇಕು. ಅವರ ಕುಟುಂಬದಲ್ಲಿ ಹಲವರು ಬಾಕ್ಸರ್ಗಳಿದ್ದಾರೆ.ಅವರು ಚಿಕ್ಕ ವಯಸ್ಸಿನಿಂದಲೇ ಬಾಕ್ಸಿಂಗ್ ಕಲಿಯಲು ಪ್ರಾರಂಭಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣೆಯಿಂದ ಅವರು ಇಂದು ವಿಶ್ವಚಾಂಪಿಯನ್ ಆಗಿದ್ದಾರೆ. ಅವರ ಮುತ್ತಾತ ಹೆವಿವೇಯ್ಟ್ ಬಾಕ್ಸರ್ ಆಗಿದ್ದವರು. ಅವರ ತಾತ ಕ್ಯಾಪ್ಟನ್ ಚಂದರ್ ಭಾನ್ ಲಂಬೋರಿಯಾ ಕುಸ್ತಿಪಟು ಆಗಿದ್ದರು.
ಇನ್ನು ಜಾಸ್ಮಿನ್ ಅವರ ಚಿಕ್ಕಪ್ಪಂದಿರಾದ ಸಂದೀಪ್ ಮತ್ತು ಪರ್ವಿಂದರ್ ಇಬ್ಬರೂ ಬಾಕ್ಸಿಂಗ್ನಲ್ಲಿ ರಾಷ್ಟಿçÃಯ ಚಾಂಪಿಯನ್ಗಳಾಗಿದ್ದರು. ಅವರಿಂದಲೇ ಜಾಸ್ಮಿನ್ ಅವರು ತಮ್ಮ ಚಿಕ್ಕಪ್ಪಂದಿರಾದ ಸಂದೀಪ್ ಸಿAಗ್ಮ ತ್ತು ಪರ್ವಿಂದರ್ ಸಿಂಗ್ ಅವರಿಂದಬಾಕ್ಸಿAಗ್ ಕಲಿತರು.ಜಾಸ್ಮಿನ್ ಅವರು ಈ ಹಿಂದೆ ಹಲವು ಪದಕಗಳನ್ನು ಗೆದ್ದಿದ್ದಾರೆ. ೨೦೨೧ ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ನಲ್ಲಿಮೊದಲ ಪದಕ ಗೆದ್ದು ಗಮನ ಸೆಳೆದರು.