ಬೆಂಗಳೂರು: ತಮ್ಮ ಗ್ರಾಮದಲ್ಲಿ ತೆರೆದಿರುವ ಮದ್ಯದಂಗಡಿಯನ್ನು ತೆರವುಗೊಳಿಸದಿರುವುದನ್ನು ಖಂಡಿಸಿ ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಿಗ್ಗೆ 11.30ಗಂಟೆಯಾದರೂ ಯಾರೂ ಮತದಾನಕ್ಕೆ ಬಾರದೆ ಮತಗಟ್ಟೆಗಳಿಗೆ ತೆರಳಿ ಯಾವ ಪಕ್ಷದ ಕಾರ್ಯಕರ್ತರು ಸಹಮತಗಟ್ಟೆ ಏಜೆಂಟಾಗಿ
ಭಾಗವಹಿಸಿರಲಿಲ್ಲ.
ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿ ಆಕ್ರೋ ಹೊರ ಹಾಕಿದ್ದಾರೆ.ಮತ್ತೊಂದೆಡೆ ಹಿರಿಯೂರು ತಾಲೂಕಿನ ಮ್ಯಾಕುರ್ಲಹಳ್ಳಿಯಲ್ಲಿ ಸಮಗ್ರ ಕುಡಿಯುವ ನೀರಿನ ಪೂರೈಕೆಗಾಗಿ ಆಗ್ರಹಿಸಿ ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಧರಣಿ ನಡೆಸಿದ್ದಾರೆ.