ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಯಾಮ್ ಕೊನ್ಸ್ಟಾಸ್ ಅವರನ್ನು ಭುಜದಿಂದ ಗುದ್ದಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಅದೇ ರೀತಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ನವಾಝ್ ಹಾಗೂ ಬಾಂಗ್ಲಾದೇಶ್ ವೇಗಿ ತಂಝೀಮ್ ಹಸನ್ ಬಿಪಿಎಲ್?ನಲ್ಲಿ ಕಿತ್ತಾಡಿಕೊಂಡಿದ್ದಾರೆ.
ಒಂದೆಡೆ ಮೊಹಮ್ಮದ್ ನವಾಝ್ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ಸಿಲ್ಹೆಟ್ ಸ್ಟ್ರೈಕರ್ಸ್ ಬೌಲರ್ಗಳು ವಿಕೆಟ್ ಪಡೆಯಲು ಹರಸಾಹಸಪಟ್ಟರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ 4 ಓವರ್ಗಳ ವೇಳೆ ನವಾಝ್ ವಿಕೆಟ್ ಪಡೆಯುವುದು ಸಿಲ್ಹೆಟ್ ತಂಡದ ಪಾಲಿಗೆ ಅನಿವಾರ್ಯವಾಗಿತ್ತು.
ಅತ್ತ ಮೊದಲೇ ಔಟಾದ ಕೋಪದಲ್ಲಿದ್ದ ಮೊಹಮ್ಮದ್ ನವಾಝ್ ನೇರವಾಗಿ ಹೋಗಿ ತಂಝೀಮ್ ಹಸನ್ ಸಾಕಿಬ್ ಅವರನ್ನು ಭುಜದಿಂದ ಗುದ್ದಿದ್ದಾರೆ. ಈ ಭುಜಬಲದ ಪರಾಕ್ರಮದೊಂದಿಗೆ ಇಬ್ಬರ ನಡುವಿನ ಮಾತಿನ ಚಕಮಕಿ ಕೂಡ ಶುರುವಾಗಿದೆ.