ಕೆ.ಆರ್.ಪೇಟೆ: ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಪುರಾಣ ಪ್ರಸಿದ್ಧ ಗೋರಕ್ಷಕ ಶ್ರೀ ಗವಿರಂಗನಾಥಸ್ಚಾಮಿಯ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಶಾಸಕ ಹೆಚ್.ಟಿ ಮಂಜು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬ್ರಹ್ಮರಥೋತ್ಸವದ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗವಿರಂಗನಾಥನ ತೇರು ಎಳೆದು ಪುನೀತರಾದರು ರಥೋತ್ಸವದ ಮೆರವಣಿಗೆಯಲ್ಲಿ ಮಂಗಳವಾದ್ಯ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಮೂಲಕ ರಥೋತ್ಸವಕ್ಕೆ ಬಂದ ಭಕ್ತರು ಉಘೇ ಉಘೇ ರಂಗನಾಥ ವೆಂಕಟರಮಣ ಎಂದು ಭಕ್ತಿಘೋಷ ಮೊಳಗಿಸಿ ರಥದ ಕಳಸಕ್ಕೆ ಹಣ್ಣು ಜವನೆ ಎಸೆದು ಭಕ್ತಿಭಾವ ಪ್ರದರ್ಶಿಸಿದರು.
ಹರಿದು ಬರುವ ರೈತರು ತಮ್ಮ ರಾಸುಗಳಿಗೆ ಯಾವುದೇ ತೊಂದರೆಯಾಗದಂತೆ ಅವುಗಳ ಪೀಳಿಗೆ ಹೆಚ್ಚಿಸುವಂತೆ ಕೋರಿ ಜಾತ್ರಾ ಮಹೋತ್ಸವದಲ್ಲಿ ಕಂಗೊಳಿಸುವಂತೆ ತಮ್ಮ ರಾಸುಗಳನ್ನು ಅಲಂಕರಿಸಿ ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿಸಿ ಹರಕೆಯನ್ನು ಹೊತ್ತವರು ಮಾಂಸಹಾರದ ಪರಸೆ ಪರಹಗಳನ್ನು ಮಾಡುವುದರ ಮೂಲಕ ತಮ್ಮ ಹರಕೆ ಸಮರ್ಪಿಸಿದರು.
ಶ್ರೀ ಗವಿರಂಗನಾಥ ಜಾತ್ರೆಗೆ ಆಗಮಿಸಿದ್ಧ ಭಕ್ತಾಧಿಗಳಿಗೆ ದೇಗುಲದ ವತಿಯಿಂದ ಭಾತ್, ಮೊಸರನ್ನ ವಿತರಣೆ ಮಾಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ಸುಮಾರಾಣಿ ರವರ ನೇತೃತ್ವದಲ್ಲಿ ಸೂಕ್ತ ಬಂದುಬಸ್ತ್ ನಿಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ,ಮಾಜಿ ಸಚಿವ ಕೆ.ಸಿ ನಾರಾಯಣಗೌಡ,ಮನ್ಮುಲ್ ನಿರ್ದೇಶಕ ಡಾಲು ರವಿ,ನಟ ಚಿಕ್ಕಣ್ಣ,ಶಾಸಕರ ಧರ್ಮಪತ್ನಿ ರಮಮಂಜು,ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್,ತಾ. ಪಂ ಮಾಜಿ ಸದಸ್ಯ ಬಿಲ್ಲೇನಹಳ್ಳಿ ಕುಮಾರ್,ಯುವ ಮುಖಂಡ ಪರಮೇಶ್ (ಪಚ್ಚಿ),ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.