ಭಾರತ: ಭಾರತದ ಪ್ರಮುಖ ಅಡುಗೆ ಸಾಮಗ್ರಿಗಳ ಬ್ರಾ÷್ಯಂಡ್ ಆಗಿರುವಟಿಟಿಕೆ ಪ್ರೆಸ್ಟೀಜ್, ತನ್ನ ಇತ್ತೀಚಿನ ಹೊಸತನದ ಉತ್ಪನ್ನ ಪ್ರೆಸ್ಟೀಜ್ ಮಲ್ಟಿ-ಕುಕ್ಕರ್ ಪಿಎಂಸಿ ೪.೦ ಲೋಕಾರ್ಪಣೆಗೊಳಿಸಿದೆ. ಈ ನಯವಾದ ಮತ್ತು ಸೊಗಸಾದ ಸಾಮಗ್ರಿಯು ಇಂದಿನ ಬಿಡುವಿಲ್ಲದ ನಗರ ಜೀವನಶೈಲಿಗೆ ಸೂಕ್ತವಾಗಿದೆ, ಇದು ಮನೆ ಅಡುಗೆಗೆ ತ್ವರಿತ, ಬಹುಮುಖ ಮತ್ತು ಸುಲಭ ಪರಿಕರವಾಗಿದೆ.
೧.೫-ಲೀಟರ್ ಸಾಮರ್ಥ್ಯವಿರುವ ಈ ಮಲ್ಟಿ-ಕುಕ್ಕರ್, ಬಿಸಿ ಸೂಪ್ ಮತ್ತು ನೂಡಲ್ಸ÷್ಗಳನ್ನು ಆವಿಯಲ್ಲಿ ಬೇಯಿಸುವುದರಿಂದ ಹಿಡಿದು ಸಂಪೂರ್ಣವಾಗಿ ಬೇಯಿಸಿದ ಪಾಸ್ತಾ, ಅನ್ನ ಅಥವಾ ಮೊಟ್ಟೆಗಳವರೆಗೆ ಎಲ್ಲವನ್ನೂ ನಿಮಿಷಗಳಲ್ಲಿ ತಯಾರಿಸಲು ಸೂಕ್ತವಾಗಿದೆ. ಉಕ್ಕಿನ ಅಂಚುಗಳುಳ್ಳ ನಯವಾದ ಗಾಜಿನ
ಮುಚ್ಚಳ, ನಿಖರವಾದ ತಾಪಮಾನ ನಿಯಂತ್ರಣ ಮತ್ತು ೩೬೦-ಡಿಗ್ರಿ ಸ್ವಿವೆಲ್ ತಳಹೊಂದಿರುವವನ್ನು ಹೊಂದಿರುವ ಇದು, ಅನುಕೂಲತೆ ಮತ್ತು ಹೊಸತನವನ್ನು ಸಂಯೋಜಿಸುತ್ತದೆ, ಇದು ದೈನಂದಿನ ಊಟವಷ್ಟೇ ಅಲ್ಲದೇ ವಾರಾಂತ್ಯದ ಹೊಸ ಹೊಸ ರುಚಿಕರ ಪ್ರಯೋಗಗಳಿಗೂ ಸಂಗಾತಿಯಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸುವವರಿಗಾಗಿ ಆರೋಗ್ಯಕರ ಭಕ್ಷ÷್ಯಗಳನ್ನು ಸುಲಭವಾಗಿ ತಯಾರಿಸಲು ಈ ಸಾಧನವು ಮೊಟ್ಟೆ ಬೇಯಿಸುವ ಅಟ್ಟಣಿಗೆಯನ್ನೂ ಹೊಂದಿದ್ದು, ಸ್ಟೀಮರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
ಸಣ್ಣ ಹಾಗೆಯೇ ಬಹುಪಯೋಗೀ ವೈಶಿಷ್ಟ÷್ಯವಿರುವ ಪ್ರೆಸ್ಟೀಜ್ ಮಲ್ಟಿ-ಕುಕ್ಕರ್, ಹಲವು ಅಡುಗೆ ಪದಾರ್ಥಗಳನ್ನು ತಯಾರಿಸಲು ಒಂದೇ ಪಾತ್ರೆಯನ್ನು ಬಯಸುವ ಯುವ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಣ್ಣ ಕುಟುಂಬಗಳಿಗೆ ಸೂಕ್ತವಾಗಿದೆ. ಇದರ ಅವಾಹಕ ಅಂದರೆ ಬಿಸಿಯಾಗದ ಹಿಡಿಕೆಗಳು ಮತ್ತು ಗುಪ್ತ ತಾಪನ ಘಟಕಗಳು, ಇದನ್ನು ಪ್ರತಿದಿನ ಬಳಸಲು ಸುರಕ್ಷಿತ ಎಂದು ಖಚಿತಪಡಿಸುತ್ತದೆ ಮತ್ತು ಇದರ ಆಧುನಿಕ ಶೈಲಿಯು ಕೌಂಟರ್ಟಾಪ್ನAತೆಯೇ ಮೇಜಿನ ಮೇಲೂ ಉತ್ತಮವಾಗಿ ಕಾಣುತ್ತದೆ.