ಚಾಮರಾಜನಗರ: ರಾಷ್ಟಿçÃಯ ಶಿಶಿಕ್ಷು ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಸರ್ಕಾರಿ ಕೈಗಾರಿಕಾ
ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳಾದ ಹೆಚ್.ಪಿ.ಶ್ರೀಕಂಠಾರಾಧ್ಯ ಅವರು ಹೇಳಿದರು. ತಾಲೂಕಿನ ಮರಿಯಾಲದ ಜೆಎಸ್ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿAದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ರಾಷ್ಟಿçÃಯ ಶಿಶಿಕ್ಷು ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟಿçÃಯ ಶಿಶಿಕ್ಷು ಮೇಳವು ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳನ್ನು ಒಂದುಗೂಡಿಸುವ ಕೊAಡಿಯಾಗಿದೆ. ಕಾರ್ಯಾಗಾರಕ್ಕೆ ಆಗಮಿಸಿರುವ ಉದ್ಯೋಗದಾತ ಸಂಸ್ಥೆಗಳಲ್ಲಿ ೧೫೦೦ಕ್ಕೂ ಅಧಿಕ ಉದ್ಯೋಗಗಳು ಖಾಲಿ ಇದ್ದು ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕು. ಪ್ರಧಾನಮಂತ್ರಿ ರಾಷ್ಟಿçÃಯ ಶಿಶಿಕ್ಷು ಮೇಳವು ಕೇಂದ್ರ ಸರ್ಕಾರದ ಒಂದು ಮಹತ್ತರವಾದ ಯೋಜನೆಯಾಗಿದ್ದು ರಾಷ್ಟಾçದ್ಯಂತ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಕಾರ್ಯಗಾರದಿAದ ಅನೇಕ ವಿದ್ಯಾರ್ಥಿಗಳ ಬದುಕು ಹಸನ್ಮುಖಿಯಾಗಿದೆ. ಎನ್.ಎಸ್.ಸಿ.ಎಸ್. ಯೋಜನೆಯಡಿ ದೇಶಾದ್ಯಂತ ಕಾರ್ಯಕ್ರಮವನ್ನು
ಆಯೋಜಿಸಿ ಅಪ್ರೆಂಡಿಸ್ ತರಬೇತಿ ನೀಡಲಾಗುತ್ತದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ವೇತನದೊAದಿಗೆ ಕೇಂದ್ರ ಸರ್ಕಾರವು ೨೦೨೦ರಿಂದ ೧೫೦೦ ರೂ. ಶಿಷ್ಯವೇತನ ಭತ್ಯೆ ನೀಡುತ್ತಿದೆ. ಆಶಾದೀಪ ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೫ ಸಾವಿರ ರೂ.
ನೀಡಲಾಗುತ್ತದೆ. ವಿದ್ಯಾರ್ಥಿಗಳು ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು ತಿಳಿಸಿದರು. ಒಂದು ರಾಷ್ಟçದ ಅಭಿವೃದ್ಧಿಗೆ ಕೈಗಾರಿಕೆಗಳು ಬಹು ಮುಖ್ಯವಾಗಿದ್ದು.
ಶೇಕಡ ೮೦ ರಿಂದ ೮೫ ರಷ್ಟು ಐ.ಟಿ.ಐ. ಡಿಪ್ಲೋಮೋ, ಎಂಜಿನಿಯರಿAಗ್ ವಿದ್ಯಾರ್ಥಿಗಳು ಕೆಲಸ ನಿರ್ವಹಿ ಸುತ್ತಿದ್ದಾರೆ.