ಹುಬ್ಬಳ್ಳಿ: ವಿಜಯನಗರದಲ್ಲಿ ಅಣ್ಣ ತಮ್ಮಂದಿರ ಜಗಳ ವಿಕೋಪಕ್ಕೆ ಹೋಗಿ ಕೊಲೆ ಮಾಡುವ ಹಂತಕ್ಕೆ ಹೋಗಿ ಅಣ್ಣ ತಮ್ಮನನ್ನ ಚಾಕುನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ವಿಜಯನಗರಲ್ಲಿ ನಡೆದ ಈ ಘಟನೆಯಲ್ಲಿ ಮೃತಪಟ್ಟ 29 ವರ್ಷದ ಪವನ ಕಟವಾಟೆ ಆಟೋ ಚಾಲಕ ನಾಗಿದ್ದು.
ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಈತ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಅದೇ ವಿಭಾಗದಲ್ಲಿ ರೂಮ್ ಮಾಡಿಕೊಂಡು ವಾಸ ಮಾಡುತ್ತಿದ್ದ ಕುಡಿದು ಬಂದು ಸುತ್ತು ಮತ್ತು ಇರೋ ಜನಕ್ಕೆ ವಿಪರೀತ ತೊಂದರೆ ಆಗುತ್ತಿತ್ತು ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿ ಅಣ್ಣ ರಾಜು ತಮ್ಮ ಪವನ್ ಮಧ್ಯೆ ಜಗಳ ಆಗಿದ್ದು ಈ ಜಗಳವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಅಣ್ಣ ರಾಜು ಮಧ್ಯರಾತ್ರಿ ಪವನ ವಾಸವಿದ್ದಬಾಡಿಗೆ ರೂಂಗೆ ಬಂದು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಹತ್ಯೆ ಮಾಡಿ ಮನೆಗೆ ತೆರಳಿ ಸ್ನಾನ ಮಾಡಿ ಪರಾರಿಯಾಗಲು ಯತಿಸುತ್ತಿದ್ದಾಗ ಪೊಲೀಸರು ಬಲೆ ಬೀಸಿ ಕೊಲೆ ಮಾಡಿದ ಅಣ್ಣ ರಾಜುನನ್ನ ಬಂಧಿಸಿದ್ದಾರೆ. ಕೊಲೆಯಾದ ಸ್ಥಳಕ್ಕೆ ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದು, ಕೊಲೆ ಮಾಡಿದ ಆರೋಪಿ ರಾಜುನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.