ಮಳವಳ್ಳಿ: ಲೋಹಿಯ ವಿಚಾರ ವೇದಿಕೆ ಬೆಂಗಳೂರು ನೇತೃತ್ವದಲ್ಲಿ ಇಂದು ಶಾಂತಿ ಪದವಿ ಮತ್ತು ಪದವಿ ಪೂರ್ವ ಕಾಲೇಜ್ ನಲ್ಲಿ ಉದ್ಯೋಗ ಮೇಳ ನಡೆಸಲಾಯಿತು ಎಸ್ ಎಸ್ ಎಲ್ ಸಿ ಪಿಯುಸಿ ಐಟಿಐ ಡಿಪ್ಲೋಮಾ ಪದವಿ ಇಂಜಿನಿಯರಿಂಗ್ ಹಾಗು ಸ್ನಾತಕೋತ್ತರ ಪದವಿದಾರರು ಪಾಲ್ಗೊಳ್ಳಲು ಕರೆ ನೀಡಲಾಯಿತು.
370 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ತಮ್ಮ ದಾಖಲೆಗಳನ್ನು ಕಂಪನಿಗಳಿಗೆ ನೀಡಿದರು.ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರಾದಬಿ.ಎಸ್ ಶಿವಣ್ಣ ಮಾತನಾಡಿ ಉದ್ಯೋಗ ಮೇಳದಿಂದ ಕುಟುಂಬದ ನಿರ್ವಹಣೆ ಆಗುತ್ತದೆ ಯುವಕ
ರಿಗೆ ಉದ್ಯೋಗ ಸಿಕ್ಕಿದರೆ ಸ್ವಾವಲಂಬಿಗಳಾಗಿ ಬದುಕಬಹುದು ಎಂಬುದೇ ನಮ್ಮ ಲೋ ಕಿಯಾ ವಿಚಾರ ವೇದಿಕೆಯ ಉದ್ದೇಶವಾಗಿದೆ ಎಂದರು.
ಈ ಕಾಲೇಜನ ಸಂಸ್ಥಾಪಕರು ಹಾಗೂ ಮಾಜಿ ಸಚಿವ ದಿವಂಗತ ಕೆ ನಾಗೇಗೌಡರ ಕನಸು ನಿರುದ್ಯೋಗಗಳಿಗೆ ಉದ್ಯೋಗ ಒದಗಿಸಿ ಕೊಡಬೇಕೆಂಬ ಬಯಕೆ ಹೊಂದಿದ್ದರೂ ಅವರ ಸೇವೆ ಅನನ್ಯವಾದುದು ಎಂದು ಸ್ಮರಿಸಿದರು.ಈ ಉದ್ಯೋಗ ಮೇಳಕ್ಕೆ 70 ಕಂಪನಿಗಳು ಪಾಲ್ಗೊಂಡಿವೆ ಇಂದು ನಾಲ್ಕು ಗಂಟೆ ಒಳಗಡೆ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಕಾಲೇಜನ ಸಂಸ್ಥಾಪಕರಾದ ನಾಗಮಣಿ ನಾಗೇಗೌಡ ಸಮಾಜ ಸೇವಕರಾದ ತಳಗೋದಿ ಪ್ರಕಾಶ್ ಕಿಚ್ಚ ಸುದೀಪ್ ಸಂಘದ ಅಧ್ಯಕ್ಷರಾದ ಶಿವರಾಜ್ ನಾಯಕ್ ಡಿವೈಎಸ್ಪಿ ಕೃಷ್ಣಪ್ಪ ಶಾಂತಿ ಕಾಲೇಜಿನ ಪ್ರಾಂಶುಪಾಲರು ಎಂ ಸಿ ಶಿವಪ್ಪ ಕಂಪನಿಗಳ ಮುಖ್ಯಸ್ಥರುಗಳು ಪಾಲ್ಗೊಂಡಿದ್ದರು