ಅಮೃತಸರ: ದೇಶದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪಂಜಾಬ್‍ನಲ್ಲಿರುವ ಅಂತರರಾಷ್ಟ್ರೀಯ ಗಡಿ ರೇಖೆ ಮೂಲಕ ಡ್ರೋನ್ ಭಾರತದತ್ತ ಬಂದಿತ್ತು. ಪಂಜಾಬ್‍ನ ಅಮೃತಸರ ಸೆಕ್ಟರ್‍ನ ಗಡಿ ಪೋಸ್ಟ್ ಹಿಂಭಾಗದ ಕಕ್ಕರ್ ಬಳಿ ಮುಂಜಾನೆ 2.30ರ ವೇಳೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
ಗಡಿಯಲ್ಲಿರುವ ತಂತಿ ಬೇಲಿ ಹಾಗೂ ಶೂನ್ಯ ರೇಖೆಯ ಬಳಿ ಡ್ರೋನ್ ಹಾಗೂ ಅದರಲ್ಲಿದ್ದ ಶಂಕಿತ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಡ್ರೋನ್‍ನ ಇನ್ನಷ್ಟು ಅವಶೇಷಗಳು ಬಿದ್ದಿವೆಯೇ ಎಂದು ಶೋಧಿಸಲಾಗುತ್ತಿದೆ ಎಂದು ಬಿಎಸ್‍ಎಸ್ ವಕ್ತಾರರು ತಿಳಿಸಿದ್ದಾರೆ.
Leave a Review