ಜಗತ್ತಿಗೆ ಜ್ಞಾನ ಮತ್ತು ವಿಜ್ಞಾನದ ಬೆಳಕನ್ನು ನೀಡಿದ ಮಹಾಜ್ಞಾನಿ ಭಗವಾನ್ ಬುದ್ಧರು ಎಂದು ವಿಶ್ವಜ್ಯೋತಿ ಬುದ್ಧ ವಿಹಾರದ ಅಧ್ಯಕ್ಷ ಕಾರಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.ಅವರು ಕಾರಹಳ್ಳಿ ಗ್ರಾಮದಲ್ಲಿರುವ ವಿಶ್ವಜ್ಯೋತಿ ಬುದ್ಧ ವಿಹಾರದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಭಗವಾನ್ ಬುದ್ಧರ 2568ನೇ ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡುತ್ತಾ,
ಜಗತ್ತಿನ ಎಲ್ಲ ಜೀವರಾಶಿಗಳಿಗೆ ಪ್ರೀತಿ ಕರುಣೆ ಮೈತ್ರಿಯ ಅವಶ್ಯಕತೆ ತಿಳಿಸಿ ಅರಿವು ಮೂಡಿಸಿದವರು ಮಾನವನ ಒಳಿತಿಗೆ ಹೊಸ ದಾರಿಯನ್ನು ತೋರಿದವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜಗತ್ತಿನ ಧರ್ಮವಾಗಿ ಬೌದ್ಧ ಧರ್ಮವನ್ನು ಪ್ರಸರಿಸಿದವರು.ಈ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿ ಭಾರತವು ಸಾವಿರಾರು ವರ್ಷಗಳ ಹಿಂದೆ ಬೌದ್ದ ಧರ್ಮವನ್ನು ಅವಲಂಬಿಸಿರುವ ಮತ್ತು ಅನುಸರಿಸುತ್ತಿರುವ ಕುರುಹುಗಳನ್ನು ಹುಡುಕಿ ನಾವು ಮೂಲತಹ ಬೌದ್ಧರು ಎಂಬುದನ್ನು ದಾಖಲೆಗಳ ಸಮೇತ ಸಂಶೋಧಿಸಿ ಜಗತ್ತಿನ ಮುಂದಿಟ್ಟವರು ಆದ್ದರಿಂದ ನಾವುಗಳು ಈ ವೈದಿಕ ಧರ್ಮವನ್ನು ತ್ಯಜಿಸಿ ನಮ್ಮ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಅನುಸರಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದರು ಆ ಕಾರಣಕ್ಕಾಗಿ ನಾವು ಮಾನವೀಯ ಧರ್ಮವಾದ ಬೌದ್ಧ ಧರ್ಮವನ್ನು ಅನುಸರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆವತಿ ತಿಮ್ಮರಾಯಪ್ಪ ಮಾತನಾಡಿ ಬೌದ್ಧ ಧರ್ಮವು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಇದು ಅಂತರಾಷ್ಟ್ರೀಯ ಧರ್ಮವಾಗಿದ್ದು ಜಗತ್ತಿನ ಎಲ್ಲ ದೇಶಗಳಲ್ಲೂ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ ಭಾರತವು ಬುದ್ಧರಿಂದ ಮಾತ್ರ ವಿಶ್ವಗುರುವಾಗಲು ಸಾಧ್ಯ ಬುದ್ಧ ನಮಗೆ ಬೆಳಕು ಆದ್ದರಿಂದ ನಾವುಗಳು ಬೌದ್ಧತ್ವವನ್ನು ಪಡೆದು ಬುದ್ಧರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಬಂತ್ತೆಜೀ ಗಳಾದ ಚಂದ್ರಚೂಡರವರು ನೆರದಿದ್ದ ಜನರಿಗೆ ತ್ರಿಸರಣ ಮತ್ತು ಪಂಚಶೀಲಗಳನ್ನು ಬೋಧಿಸಿದರು ಬೌದ್ಧ ಧರ್ಮ ಒಂದು ಜಾತಿಯ ಸೀಮಿತವಾಗಿಲ್ಲ ಇಲ್ಲಿ ಎಲ್ಲ ಜಾತಿ ಜನ ವರ್ಗಗಳು ಭಾಗವಹಿಸುವ ಮೂಲಕ ಬುದ್ಧರನ್ನು ನಾವು ಮನೆಮನೆಗೂ ತಲುಪಿಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ತಿಳಿಸಿದರು.
ಉಪನ್ಯಾಸಕ ಮುನಿರಾಜು ಮಾತನಾಡಿ, ಬುದ್ಧ ಧರ್ಮವು ಜನರಲ್ಲಿ ಶಾಂತಿ ನೆಮ್ಮದಿ ಪ್ರೀತಿ ಕರುಣೆಯನ್ನು ನೀಡುತ್ತದೆ ನಾವುಗಳು ಅನುಸರಿಸಿ ಭಾರತವನ್ನು ಬೌದ್ಧರಾಷ್ಟ್ರವನ್ನಾಗಿ ಮಾಡಬೇಕು ಎಂದು ತಿಳಿಸಿದರು.ವಿಶ್ವಜ್ಯೋತಿ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿಗಳಾದ ಕೆಂಪಣ್ಣ ಮಾತನಾಡಿ ನಾವುಗಳು ಅಂಬೇಡ್ಕರ್ ಮತ್ತು ಬುದ್ಧರ ವಿಚಾರಗಳನ್ನು ಅರ್ಥ ಮಾಡಿಕೊಂಡು ನಮ್ಮ ಸಮುದಾಯಕ್ಕೆ ತಿಳಿಸುವ ಕೆಲಸ ಮಾಡಬೇಕು ಈ ವಿಹಾರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನ ಮುಂದುವರಿಸಬೇಕು ಎಂದರು.
ಬುದ್ದವಿಹಾರದ ಖಜಾಂಚಿಯಾದ ಟಿ.ಕೇಶವ ಅವರು ಮಾತನಾಡಿ, ನಮ್ಮಲ್ಲಿರುವ ವಿದ್ಯಾವಂತ ಯುವಕರು ತಾವು ಪಾಲಿಸುವ ಮೌಡ್ಯಗಳನ್ನು ದೂರ ಮಾಡಿ ವೈಜ್ಞಾನಿಕವಾಗಿ ಯೋಚಿಸುವ ಮೂಲಕ ನಮ್ಮ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬೇಕಿದೆ ನಾವು ಬಾಬಾ ಸಾಹೇಬರ ಹಾದಿಯಲ್ಲಿ ಮುನ್ನಡೆದು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಲಕ್ಷ್ಮಿ ಚಂದ್ರು. ಮಾಜಿ ಉಪಾಧ್ಯಕ್ಷರಾದ ಪಟಾಲಪ್ಪ. ಗಂಗಪ್ಪ ನಾರಾಯಣಪ್ಪ ನಾಗರಾಜು ಅಂಜನಪ್ಪ ರಾಜು ಪ್ರಕಾಶ್ ಕುಮಾರ್ ಆನಂದ್ ಪಟಾಲಪ್ಪ ಸುಬ್ರಮಣಿ ಮಂಜು ಪ್ರಸನ್ನ ಮುನಿರಾಜು ಕೃಷ್ಣಪ್ಪ ಆಶಾ ಅರುಣ. ನಾಗಮ್ಮ ಮುಂತಾದವರು ಭಾಗವಹಿಸಿದ್ದರು.