ಅಹಮದಾಬಾದ್: ಭಾರತ ತಂಡದ ವೇಗದ ಬೌಲರ್ ಜಸ್‍ಪ್ರೀತ್ ಬೂಮ್ರಾ ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ನ್ಯೂಜಿಲೆಂಡ್‍ನ ಕ್ರೈಸ್ಟ್‍ಚರ್ಚ್‍ನಲ್ಲಿರುವ ಆಸ್ಪತ್ರೆಯಲ್ಲಿ ಮೂಳೆತಜ್ಞ ಡಾ. ರೋವನ್ ಶೌಟೆನ್ ಅವರ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ಮೂಲಗಳು ತಿಳಿಸಿವೆ.
ಬೂಮ್ರಾ ಅವರಿಗೆ ಮುಂದಿನ ಆರು ತಿಂಗಳು ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಿಲ್ಲ. ಹೋದ ವರ್ಷದ ಟಿ20 ವಿಶ್ವಕಪ್ ಸಂದರ್ಭದಲ್ಲಿ ಬೂಮ್ರಾ ಬೆನ್ನುನೋವಿನಿಂದಾಗಿ ಕಣದಿಂದ ಹಿಂದೆ ಸರಿದಿದ್ದರು. ಅದರ ನಂತರ ಅವರು ಕ್ರಿಕೆಟ್ ಆಡಿಲ್ಲ. ಬೆಂಗಳೂರಿನ ಎನ್‍ಸಿಎನಲ್ಲಿಯೂ ಇದ್ದರು.
Leave a Review