ಮುಂಬೈ: ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಮಂಗಳವಾರ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ ಸಂದೇಶವೊಂದು ತೀವ್ರ ಕುತೂಹಲ ಮೂಡಿಸಿತು.
‘ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರ’ ಎಂಬ ಸಂದೇಶವನ್ನು ಅವರು ತಮ್ಮ ಡಿ.ಪಿ (ಡಿಸ್ಪ್ಲೇ ಚಿತ್ರ)ಯೊಂದಿಗೆ ಪೋಸ್ಟ್ ಮಾಡಿದ್ದರು.
ಇನ್ಸ್ಟಾಗ್ರಾಮ್ ಸ್ಟೋರಿಯ ಪೋಸ್ಟ್ಗಳು ಸಾಮಾನ್ಯವಾಗಿ 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ.
ಬೂಮ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ.
ವಿವಾದ, ಚರ್ಚೆಗಳಿಗೂ ಆಸ್ಪದ ಕೊಟ್ಟಿದ್ದು ಕಡಿಮೆ. ಎಲ್ಲದಕ್ಕೂ ತಮ್ಮ ಬೌಲಿಂಗ್ ಸಾಧನೆಯ ಮೂಲಕವೇ ಉತ್ತರ ಕೊಟ್ಟವರು.